ಎಸ್.ಪಿ. ರವರ ಸಂದೇಶ
ಈ ದೇಶದಲ್ಲಿ ಸಾಮಾನ್ಯವಾಗಿ ಸಾರ್ವಜನಿಕರ ಮತ್ತು ಪೋಲಿಸರ ಸಂಬಂಧದ ನಡುವೆ ಆಳವಾದ ಕಂದಕ ಇದೆ. ಆದ್ದರಿಂದ ಕೊಪ್ಪಳ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಎಲ್ಲಾ ಪ್ರಮುಖ ಮಾಹಿತಿಗಳನ್ನು ಜನರ ಕೈಗೆಟಕುವಂತೆ ಮಾಡಿ ಈ ಅಂತರದ ಮಧ್ಯೆ ಸೇತುವೆಯನ್ನು ನಿರ್ಮಿಸುವ ಪ್ರಯತ್ನ ಇದಾಗಿದೆ.
ನಮ್ಮ ಪರಿಶ್ರಮವನ್ನು ಕೊಪ್ಪಳ ಜನರು ಅರ್ಥೈಸಿ ನಮಗೆ ಉತ್ತಮ ಪ್ರತಿಕ್ರಿಯೆ ಮತ್ತು ಸಹಕಾರ ನೀಡುತ್ತಾರೆಂಬ ಆಶಯವಿದೆ. ಅಲ್ಲದೆ ಯಾವಾಗ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯಲ್ಲಿ ತಾನು ಒಬ್ಬ ಸಮವಸ್ತ್ರ ಧರಿಸದ ಪೊಲೀಸ್ ಮತ್ತು ಪ್ರತಿಯೊಬ್ಬ ಪೊಲೀಸನಲ್ಲಿ ತಾನೊಬ್ಬ ಸಮವಸ್ತ್ರ ಧರಿಸಿದ ಸಾಮಾನ್ಯ ಮನುಷ್ಯ ಎಂಬ ಭಾವನೆ ಮೂಡುವುದೋ ಆಗ ಮಾತ್ರ ಇಬ್ಬರ ನಡುವಿನ ಸಂಬಂಧ ಬೆಸೆಯಲು ಸಾಧ್ಯ. ಹಾಗಾದಾಗ ಎಲ್ಲೆಡೆ ಕಾನೂನನ್ನು ಎತ್ತಿ ಹಿಡಿಯಲು ಹಾಗೂ ಸಾಮಾನ್ಯರಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ.
ಶ್ರೀಮತಿ. ಜಿ. ಸಂಗೀತಾ
ಪೊಲೀಸ್ ಅಧೀಕ್ಷಕರು,ಕೊಪ್ಪಳ

ಶ್ರೀಮತಿ. ರೇಣುಕಾ ಕೆ. ಸುಕುಮಾರ
ಪೊಲೀಸ್ ಅಧೀಕ್ಷಕರು, ಕೊಪ್ಪಳ