Emblem

ಕ್ರೀಕೆಟ್ ಬೆಟ್ಟಿಂಗ್ ದಾಳಿ.

ದಿನಾಂಕ:30-10-2020 ರಂದು ರಾತ್ರಿ ಯಲಬುರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗನಾಳ ಗ್ರಾಮದ ಬಸ್ಸನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ರಾಜು ತಂದೆ ಶರಣಪ್ಪ ಮುರಡಿ ಸಾ: ಸಂಗನಾಳ ಇತನು ರಾಜಸ್ಥಾನ ರಾಯಲ್ಸ ಮತ್ತು ಕಿಂಗ್ಸ ಎಲೆವನ್ ತಂಡಗಳ ನಡುವೆ ನಡೆಯುತ್ತಿರುವ ಟಿ-20 ಕ್ರೀಕೇಟ್ ಪಂದ್ಯದಲ್ಲಿ ತಮ್ಮ ಫೆವರೇಟ್ ತಂಡ ಕಿಂಗ್ಸ ಎಲವನ್ ಪಂಜಾಬ್ ತಂಡ ಇಂದು ಗೆಲ್ಲುತ್ತದೆ ಇದಕ್ಕೆ ಬೆಟ್ಟಿಂಗ್ ಕಟ್ಟಿ 100 ರೂ.ಗೆ 200 ರೂಪಾಯಿ ಗೆಲ್ಲಿರಿ ಅಂತಾ ಜನರಿಗೆ ಕರೆಯುತ್ತಾ ಅದೃಷ್ಠದ ಕ್ರಿಕೇಟ್ ಬೆಟ್ಟಿಂಗದಲ್ಲಿ ತೊಡಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಾ ಮೋಬೈನಲ್ಲಿ ಮೇಸೆಜ್ ಕಳುಹಿಸುತ್ತಾ ಮತ್ತು ಮಾತನಾಡುತ್ತ ಇದ್ದಾಗ ಶ್ರೀ ಹನುಮಂತಪ್ಪ ಪಿ.ಎಸ್.ಐ. ಯಲಬುರ್ಗಾ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನ ಹತ್ತಿರ ಕ್ರಿಕೇಟ ಜೂಜಾಟದ ನಗದು ಹಣ 14900/- ರೂಗಳು ಮತ್ತು ಒಂದು ಗ್ಯಾಲೇಕ್ಸಿ ಸ್ಯಾಂಸಂಗ  ಕಂಪನಿಯ ಎ-71 ಮೊಬೈಲನ್ನು ಪಂಚರ ಸಮಕ್ಷಮದಲ್ಲಿ ಜಪ್ತಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಇಸ್ಪೇಟ್ ಜೂಜಾಟ ದಾಳಿ.

ದಿನಾಂಕ: 30-10-2020 ರಂದು ಮುನಿರಾಬಾದ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬಂಡಿ ಹರ್ಲಾಪೂರ ಗ್ರಾಮದ ಆಂಜನೇಯ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ಸುಮಾರು 05 ಜನ ಆರೋಪಿತನು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಸುಪ್ರೀತ್  ಪಿ.ಎಸ್.ಐ. ಮುನಿರಾಬಾದ್ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಸದರಿಯವರಿಂದ 52 ಇಸ್ಪೇಟ ಎಲೆಗಳು, 1 ಹಳೆ ಟವೆಲ್ ಹಾಗೂ ಒಟ್ಟು ನಗದು ಹಣ  11,120-00 ರೂ. ಜಪ್ತಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

 

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

481284