Emblem

ಕ್ರೀಕೆಟ್ ಬೆಟ್ಟಿಂಗ್ ದಾಳಿ.

ದಿನಾಂಕ: 27-10-2020 ರಂದು ಸಂಜೆ 5-15 ಗಂಟೆಯ ಸುಮಾರಿಗೆ ಶ್ರೀ. ಮಾರುತಿ ಗುಳ್ಳಾರಿ ಪಿ.ಐ. ಕೊಪ್ಪಳ ನಗರ ಪೊಲೀಸ್ ಠಾಣೆರವರಿಗೆ ಕೊಪ್ಪಳ ನಗರದ ದಿವಟರ್ ಸರ್ಕಲ್ ಹತ್ತಿರ ಐ.ಪಿ.ಎಲ್. ಪಂದ್ಯಾವಳಿಯ ಬೆಟ್ಟಿಂಗದಲ್ಲಿ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು ಹೋಗಿ ದಾಳಿ ಮಾಡಿ ಆರೋಪಿತನಾದ ಇನಾಯತ ತಂದೆ ಚಿನ್ನುಸಾಬ ಗಂಗಾವತಿ ವಯಾ 30 ವರ್ಷ ಜಾ: ಮುಸ್ಲಿಂ ಉ: ಬೀಡಿ ಕಟ್ಟು ಕೆಲಸ ಸಾ: ದಿಡ್ಡಿಕೇರಿ ಓಣಿ ಕೊಪ್ಪಳ ಇತನನ್ನು ವಶಕ್ಕೆ ಪಡೆದು ಸದರಿಯವನ ಹತ್ತಿರ ಕ್ರಿಕೇಟ್ ಜೂಜಾಟದ ನಗದು ಹಣ ರು: 2,500=00 ಮತ್ತು ಒಂದು ವಿವೋ ಮೊಬೈಲ್ ಅಂ.ಕಿ.ರೂ: 1,000=00 ಬೆಲೆ ಬಾಳುವುದು ಸಿಕ್ಕಿದ್ದು ಹಾಗೂ ಓಡಿ ಹೋದ ಇನ್ನೊಬ್ಬನ ಹೆಸರನ್ನು ವಿಚಾರಿಸಲು ಅವನ ಹೆಸರು ಹನುಮಂತ ದೇವು ಇಡ್ಲಿ ಸೆಂಟರ್ ಕೊಪ್ಪಳ ಅಂತಾ ತಿಳಿಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ: 27-10-2020 ರಂದು ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಗಿ ಗ್ರಾಮದ ನಂದಿ ಸರ್ಕಲ್ ಹತ್ತಿರ ನಾಗರಾಜ ಇವರ ಕಾಯಿ ಅಂಗಡಿಯ ಮುಂದುಗಡೆ ಆರೋಪಿತರಾದ ಹನುಮೇಶ ತಂದೆ ಯಲ್ಲಪ್ಪ ಶಿಳ್ಳಿಕ್ಯಾತರ ಹಾಗೂ ಸುಭಾಶ ಟಿ.ಎನ್. ಸಾ: ಹುಲಗಿ ಇವರು ತಮ್ಮ ಮೊಬೈಲ್ ಪೋನ್ ದಲ್ಲಿ ಇಂದು ನಡೆದ ಸನ್ ರೈಸಜ್ರ್ಸ (ಎಸ್.ಆರ್.ಹೆಚ್) ಮತ್ತು ಡೆಲ್ಲಿ ಕ್ಯಾಪಿಟಲ್ (ಡಿ.ಸಿ) ತಂಡಗಳ ಮಧ್ಯ ಐ.ಪಿ.ಎಲ್ ಕ್ರಿಕೆಟ್ ಪಂದ್ಯವನ್ನು ವೀಕ್ಷಣೆ ಮಾಡುತ್ತಾ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದರ 500-00 ರೂ.ಗಳಿಗೆ 1000-00 ರೂ. ಕೊಡುತ್ತೇವೆ ಅಂತಾ ಬಿಡ್ ಮಾಡಿ ಹಣ ಪಡೆದುಕೊಳ್ಳುತ್ತಾ ಒಂದು ನೋಟ್ ಪುಸ್ತಕದಲ್ಲಿ ಬರೆದಕೊಳ್ಳುತ್ತಿದ್ದಾಗ ಶ್ರೀ ಸುಪ್ರೀತ್.ವಿ., ಪಿ.ಎಸ್.ಐ. ಮುನಿರಾಬಾದ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಸದರಿಯವರಿಂದ ಐ.ಪಿ.ಎಲ್. ಕ್ರಿಕೆಟ್ ಬೆಟ್ಟಿಂಗ್ಗೆ ಸಂಬಂಧಪಟ್ಟ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

481304