Emblem

ಮಟ್ಕಾ ಜೂಜಾಟ ದಾಳಿ.

ದಿನಾಂಕ: 16-10-2020 ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪಳ ನಗರದ ಸೈಲಾನಪೂರ ಓಣಿಯಲ್ಲಿನ ಝಂಡಾ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ವಲಿಸಾಬ ತಂದೆ ನಿಜಾಮಸಾಬ ದಲಾಯತ್ ವಯಾ 52 ವರ್ಷ ಜಾ: ಮುಸ್ಲಿಂ ಉ: ಮಟಕಾ ಚೀಟಿ ಬರೆದು ಕೊಡುವುದು ಸಾ: ಸೈಲಾನಪೂರ ಓಣಿ ಕೊಪ್ಪಳ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ಚಂದ್ರಪ್ಪ ಹೆಚ್. ಪಿ.ಎಸ್.ಐ(ಕಾ&ಸು) ಕೊಪ್ಪಳ ನಗರ ಪೊಲೀಸ್ ಠಾಣೆರವರು  ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ: 1,510=00 ಹಾಗೂ ಮಟ್ಕಾ ಚೀಟಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ: 16-10-2020 ರಂದು ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಗಿರಿ ಪಟ್ಟಣದ ಗೊಲ್ಲೆಗೆರಪ್ಪ ಕಾಲೋನಿ ದರ್ಗಾ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ವಿಜಯನಾಯಕ ತಂದೆ ಹನುಮಂತರಾಯ ನಾಯಕ ಸಾ: ಹುಲಿಹೈದರ ಹಾಗೂ ಹೂವಪ್ಪ ತಂದೆ ತಂದೆ ಶಂಕ್ರಪ್ಪ ಇಟಗಿ ಸಾ: ಕನಕಗಿರಿ ಇವರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಪ್ರಶಾಂತ ಪಿ.ಎಸ್.ಐ ಕನಕಗರಿ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 950=00 ಗಳನ್ನು ಹಾಗೂ ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ:-16-06-2020 ರಂದು ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ ಜೂರಟಗಿಯಲ್ಲಿ ಶಿವಲಿಂಗೇಶ್ವರ ದೇವಸ್ಥಾನದ ಮುಂದೆ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ  ಕೆ. ಸಾಬಣ್ಣ ತಂದೆ ಹನುಮಂತಪ್ಪ ವಯಾ-34ವರ್ಷ ಜಾ.ನಾಯಕ ಉ:ವ್ಯಾಪಾರ ಸಾ. ಹೊಸಜೂರಟಗಿ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಅವಿನಾಶ ಕಾಂಬಳೇ, ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ ಮಟ್ಕಾ ಜೂಜಾಟದ ನಗದು ಹಣ ರೂ.860=00 ಗಳನ್ನು ಮತ್ತು ಮಟ್ಕಾ ಜೂಜಾಟದ ಸಾಮಾಗ್ರಿಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಸದ್ರಿ ಆರೋಪಿತನು ಸದ್ರಿ ಮಟ್ಕಾ ಪಟ್ಟಿ ಮತ್ತು ಮಟ್ಕಾ ಜೂಜಾಟದ ನಗದು ಹಣವನ್ನು ಯಮನೂರಪ್ಪ ತಂದೆ ರಾಮಪ್ಪ ನಾಯಕ ಸಾ. ಹೊಸಜೂರಟಗಿ  ಇತನಿಗೆ ಕೊಡುವುದಾಗಿ ಒಪ್ಪಿಕೊಂಡಿದ್ದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.     

ದಿನಾಂಕ: 16-10-2020 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಆಗೋಲಿ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಗುಡಿಯ  ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಯುನುಸ್ ಮಿಯಾ ತಂದೆ ಇಸ್ಮಾಯಿಲಸಾಬ  ಗಡಾದ ವಯಾ- 65 ವರ್ಷ ಜಾ- ಮುಸ್ಲಿಂ  ಉ- ಕೂಲಿ ಕೆಲಸ ಸಾ : ಆಗೋಲಿ  ತಾ : ಗಂಗಾವತಿ ಇವನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಯಲ್ಲಪ್ಪ. ಪಿ.ಎಸ್.ಐ [ಅವಿ] ಗಂಗಾವತಿ ಗ್ರಾಮೀಣ ಠಾಣೆ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಮಟಕಾ ಜೂಜಾಟದ ನಗದು ಹಣ ರೂ. 1580=00 ಗಳು, ಒಂದು ಮಟಕಾ ಪಟ್ಟಿ, ಮತ್ತು ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ಪಟ್ಟಿಯನ್ನು ಹಸನಸಾಬ ತಂದೆ ಸತ್ತಾರಸಾಬ ಸಾ:ಲಕ್ಷ್ಮೀ ಕ್ಯಾಂಪ್ ಗಂಗಾವತಿ ಎಂಬಾತನಿಗೆ ಕೊಡುವುದಾಗಿ ತಿಳಿಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಇಸ್ಪೇಟ್ ಜೂಜಾಟ ದಾಳಿ.

ದಿನಾಂಕಃ 16-10-2020 ರಂದು ಸಂಜೆ 6-30 ಗಂಟೆಗೆ ಶ್ರೀ ಪ್ರಶಾಂತ ಹೆಚ್ ಪಿ.ಎಸ್.ಐ ಕನಕಗಿರಿ ಪೊಲಿಸ್ ಠಾಣೆ ರವರು ಕನಕಗಿರಿ ಠಾಣಾ ವ್ಯಾಪ್ತಿಯ ಜೀರಾಳ ಗ್ರಾಮದ ವಾಲ್ಮೀಕಿ ಸರ್ಕಲ್ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ 7 ಜನ ಆರೋಪಿತರು ಸೇರಿಕೊಂಡು ಸಾರ್ವಜನಿಕರ ಪ್ರಾಣಕ್ಕೆ ಅಫಾಯಕಾರಿಯಾದ ಕೋರೋನಾ (ಕೋವಿಡ್-19)ನ ವೈರಸ್ ಸೊಂಕಿನ ಬಗ್ಗೆ ನಿರ್ಲಕ್ಷ್ಯತೆ ವಹಿಸಿ ಉದ್ದೇಶ ಪೂರ್ವಕವಾಗಿ ದುಂಡಾಗಿ ಕುಳಿತುಕೊಂಡು ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ್ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾಗ್ಗೆ ದಾಳಿ ಮಾಡಿ 7 ಜನ ಆರೋಪಿತರನ್ನು ಹಿಡಿದುಕೊಂಡಿದ್ದು ಸಿಕ್ಕ ಆರೋಪಿತರಿಂದ ರೂ.4,300=00 ನಗದು ಹಣ, 52 ಇಸ್ಪೀಟ್ ಎಲೆಗಳು ಮತ್ತು ಹಳೆ ಬರಕಾನ್ನು ಪಂಚನಾಮೆ ಮೂಲಕ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ : 16-10-2020 ರಂದು ಸಾಯಂಕಾಲ 4-00 ಗಂಟೆಗೆ ಶ್ರೀ ಚಿತ್ತರಂಜನ್ ಪಿ.ಎಸ್.ಐ ಸಾಹೇಬರು, ಕುಷ್ಟಗಿ ಠಾಣೆ ರವರು ಕುಷ್ಟಗಿ ಪಟ್ಟಣದ ಲಿಯೋ ಕಾಲೋನಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ ಬಾಹರ ಎಂಬ ಇಸ್ಪಿಟ್ ಜೂಜಾಟ ನಡೆದಿದೆ ಅಂತಾ ಖಚಿತವಾದ ಭಾತ್ಮಿ ಬಂದಿದ್ದು ಪಂಚರೊಂದಿಗೆ ಮತ್ತು ಸಿಬ್ಬಂದಿಯವರೊಂದಿಗೆ ಹೋಗಿ ರೇಡ್ ಮಾಡಿದಾಗ 06 ಜನ ಆರೋಪಿತರು ಸಿಕ್ಕಿದ್ದು ಸದರಿ  ಆರೋಪಿತರಿಂದ ದೊರೆತ ಇಸ್ಪೀಟ್ ಜೂಜಾಟದ ನಗದು ಹಣ 3380-00 ರೂಪಾಯಿ, 52 ಇಸ್ಪೇಟ್ ಎಲೆಗಳು, ಹಾಗೂ ಹಳೆಯ ನ್ಯೂಸ್ ಪೇಪರನ್ನು ಪಂಚನಾಮೆಯ ಕಾಲಕ್ಕೆ ಜಪ್ತಿ ಮಾಡಿಕೊಂಡು 06 ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

466466