Emblem

ಮಟ್ಕಾ ಜೂಜಾಟ ದಾಳಿ.

ದಿನಾಂಕ: 10-10-2020 ರಂದು ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಟಗಿ-ನವಲಿ ಮುಖ್ಯ ರಸ್ತೆಯ ಮೇಲೆ ಕಾರಟಗಿ ಪಟ್ಟಣದ ಎಮ್.ಕೆ ರೈಸ್ ಮಿಲ್ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಆರೋಪಿ ಶರಣಪ್ಪ ಬಸಪ್ಪ ಸಾ: ಜೆ.ಪಿ. ನಗರ ಕಾರಟಗಿ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಆರ್.ಎಸ್. ಉಜ್ಜನಕೊಪ್ಪ, ಡಿ.ಎಸ್.ಪಿ ಸಾಹೇಬರು ಗಂಗಾವತಿ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ ಎರಡು ಮಟ್ಕಾ ನಂಬರ್ ಪಟ್ಟಿಗಳು, ಒಂದು ಬಾಲ್ ಪೆನ್ನು ಮತ್ತು ಸಾರ್ವಜನಿಕರಿಂದ ಸಂಗ್ರಹಿಸಿದ್ದ ಒಟ್ಟು ರೂ.11,370/- ಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ: 10-10-2020 ರಂದು ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮಾರುತಿ ತಂದೆ ಯಮನಪ್ಪ ಪೂಜಾರ ಸಾ: ರಾಂಪೂರ ಇತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಪ್ರಶಾಂತ ಪಿ.ಎಸ್.ಐ. ಕನಕಗಿರಿ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ ರೂ.630=00 ನಗದು ಹಣ ಮತ್ತು ಮಟಕಾ ಸಾಮಾಗ್ರಿಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ: 10-10-2020 ರಂದು ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಕ್ಯಾಂಪಿನಲ್ಲಿರುವ ಆಂಜನೇಯ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಬೀಮಪ್ಪ ತಂದೆ ಸೋಮಪ್ಪ ಡ್ರೈವರ ವಯಾ: 20 ವರ್ಷ ಜಾ:     ಕುರುಬರು ಉ: ಟೈಲ್ಸ ಕೆಲಸ ಸಾ: ಲಕ್ಷ್ಮೀಕ್ಯಾಂಪ, ಗಂಗಾವತಿ ಈತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ವೆಂಕಟಸ್ವಾಮಿ ಟಿ. ಪಿ.ಐ. ನಗರ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ [01] ನಗದು ಹಣ ರೂ. 1225-00. 02] ಮಟ್ಕಾ ನಂಬರ ಬರೆದಿರುವ 03 ಚೀಟಿ ಮತ್ತು (03) 01 ಬಾಲ್ ಪೆನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಕ್ರಿಕೆಟ್ ಬೆಟ್ಟಿಂಗ್ ದಾಳಿ.

ದಿನಾಂಕ: 10-10-2020 ರಂದು ಕನಕಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಗಿರಿಯ ಪಟ್ಟಣದ ನೀರಲೂಟಿ ಕ್ರಾಸ್ ನಲ್ಲಿರುವ ರೊಟ್ಟಿ ನಾಗೇಶ ಇವರ ಕಾಂಪ್ಲೇಕ್ಸ್ ನಲ್ಲಿರುವ ರಾಯಲ್ ಟೇಲರಿಂಗ್ ಶಾಪ್ ಮುಂದೆ ಇರುವ ರಸ್ತೆಯ ಮೇಲೆ ಆರೋಪಿ ರಹೀಮಾನ ತಂದೆ ಹುಸೇನಸಾಬ ಮಂಗಳಾಪೂರ ಸಾ: ಹುಲಿಹೈದರ ಇತನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನೈ ಸೂಪರ್ ಕಿಂಗಸ್ ನಡುವಿನ ಐ.ಪಿ.ಎಲ್ ಕ್ರೀಕೇಟ್ ಪಂದ್ಯದ ಪಲಿತಾಂಶದ ಮೇಲೆ ಬೆಟ್ಟಿಂಗ್ ದಲ್ಲಿ ತೊಡಗಿದ್ದಾಗ್ಗ ಶ್ರೀ ಪ್ರಶಾಂತ ಪಿ.ಎಸ್.ಐ. ಕನಕಗಿರಿ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಬೆಟ್ಟಿಂಗ್ ಹಣ ರೂ. 850=00 ನಗದು ಹಣ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಂದು ಮೈಕ್ರೋ ಮ್ಯಾಕ್ಸ್ ಕಂಪನಿಯ ಮೋಬೈಲ್ ಫೋನ್ ಅಂದಾಜು ಕಿಮ್ಮತ್ತು ರೂ.1000=00 ಬೆಲೆ ಬಾಳುವವನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

466485