Emblem

ಮಟ್ಕಾ ಜೂಜಾಟ ದಾಳಿ.

ದಿನಾಂಕ: 27-02-2020 ರಂದು ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗಾವತಿ ನಗರದ ಕಂಪ್ಲಿ ರಸ್ತೆಯಲ್ಲಿ ಸಿಟಿ ಆಸ್ಪತ್ರೆ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಫಾರೂಖ್ ತಂದೆ ಹುಸೇನಸಾಬ ವಯಸ್ಸು 30 ವರ್ಷ ಜಾ:  ಮುಸ್ಲಿಂ ಉ: ಹೊಟೇಲ್ ವ್ಯಾಪಾರ ಸಾ: ಪ್ರಶಾಂತ ನಗರ,  ಗಂಗಾವತಿ ಈತನು ಮಟಕ ಜೂಜಾಟದಲ್ಲಿ ತೊಡಗಿರುವಾಗ ಶ್ರೀಮತಿ ಶಹನಾಜ್ ಬೇಗಂ, ಮ.ಪಿ.ಎಸ್.ಐ. (ಅ.ವಿ) ಗಂಗಾವತಿ ನಗರ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ಸದರಿಯವನಿಂದ ಮಟಕಾ ಜೂಜಾಟದಿಂದ ಸಂಗ್ರಹಿಸಿದ ಒಟ್ಟು ನಗದು ಹಣ ರೂ: 2250-00 ಗಳನ್ನು ಹಾಗೂ ಮಟ್ಕಾ ಸಾಮಗ್ರಿಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ:27-02-2020 ರಂದು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಶ್ಯಾಮೀದಲಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಚಂದ್ರಯ್ಯ ತಂದೆ ವೀರಯ್ಯ ಕಲ್ಮಠ, ವಯ: 55 ವರ್ಷ. ಜಾತಿ:ಜಂಗಮ ಉ: ಪಾನಶಾಪ ಅಂಗಡಿ ವ್ಯಾಪಾರ ಸಾ: ತಾವರಗೇರಾ ಇತನು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಚಂದ್ರಶೇಖರ ಜಿ, ಸಿ.ಪಿ.ಐ ಸಾಹೇಬರು ಕುಷ್ಟಗಿ ವೃತ್ತರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆತನಿಂದ ಜೂಜಾಟದ ಒಟ್ಟು ನಗದು ಹಣ 720=00, ರೂ, ನಗದು ಹಣ ಹಾಗೂ ಮಟ್ಕಾ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ:27-02-2020 ರಂದು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾವರಗೇರಾ ಪಟ್ಟಣ ಪಂಚಾಯತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1] ಶರಣಪ್ಪ ತಂದೆ ವೀರಪ್ಪ ಮ್ಯಾಗಳಮನಿ ವಯ: 45 ವರ್ಷ. ಜಾತಿ:ಲಿಂಗಾಯತ ಉ:ಕೂಲಿ ಕೆಲಸ ಸಾ: ತಾವರಗೇರಾ ತಾ;ಕುಷ್ಟಗಿ ಜೂಜಾಟ ಪಟ್ಟಿ ಬರೆಯುತ್ತಿದ್ದ ಆರೋಪಿ 2] ದಶರಥಸಿಂಗ್ ತಂದೆ ಶ್ಯಾಮಸಿಂಗ್ ಬಡಿಗೇರ ವಯ: 36 ವರ್ಷ. ಜಾತಿ:ರಜಪೂತ ಉ:ಕೂಲಿ ಕೆಲಸ ಸಾ: ತಾವರಗೇರಾ. ತಾ: ಕುಷ್ಟಗಿ ಇವರು ಮಟ್ಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಚಂದ್ರಶೇಖರ ಜಿ, ಸಿ.ಪಿ.ಐ ಸಾಹೇಬರು ಕುಷ್ಟಗಿ ವೃತ್ತರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಜೂಜಾಟದ ಒಟ್ಟು ನಗದು ಹಣ 674=00, ರೂ, ನಗದು ಹಣ ಹಾಗೂ ಮಟ್ಕಾ ಸಾಮಗ್ರಿಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

442924