Emblem

ಅಕ್ರಮ ಮದ್ಯ ಮಾರಾಟ ದಾಳಿ.

ದಿನಾಂಕ : 17-02-2020 ರಂದು ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಂದ್ರಾಳ ಗ್ರಾಮದ ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ದೇವೇಂದ್ರಪ್ಪ ತಂದೆ ಹನುಮಪ್ಪ ಸಾ: ಹಂದ್ರಾಳ ಇತನು ಮದ್ಯ ಮಾರಾಟ ಮಾಡಲು ಮತ್ತು ಇಟ್ಟುಕೊಳ್ಳಲು ಯಾವುದೇ ಪರವಾನಿಗೆ ಮತ್ತು ದಾಖಲಾತಿ ಇಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದಾಗ ಶ್ರೀ ಬಸವರಾಜ ಅಡವಿಬಾವಿ ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ 2,910=00 ಮೌಲ್ಯದ ಮದ್ಯ ಹಾಗೂ ನಗದು ಹಣ 120-00 ರೂ ಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ: 17-02-2020 ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜಕಲ್ ಗ್ರಾಮದ ಸಂಗೋಳ್ಳಿ ರಾಯಣ್ಣ ಮೂರ್ತಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಮಲ್ಲಮ್ಮ ಸಾ: ಬಿಜಕಲ್ ಇವಳು ಅನಧಿಕೃತವಾಗಿ ಯಾವುದೇ ಲೈಸನ್ಸ ವಗೈರಾ ಹೊಂದಿರದೇ ಮದ್ಯ ಮಾರಾಟ ಮಾಡುತ್ತಿದ್ದಾಗ ಶ್ರೀ ಜಿ. ಚಂದ್ರಶೇಖರ ಸಿ.ಪಿ.ಐ. ಕುಷ್ಟಗಿ ವೃತ್ತ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಅಂ.ಕಿ. 1576=64 ರೂ, ಕಿಮ್ಮತ್ತಿನ ಮದ್ಯವನ್ನು ಜಪ್ತು ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಮಟ್ಕಾ ಜೂಜಾಟ ದಾಳಿ. 

ದಿನಾಂಕ: 17-02-2020 ರಂದು ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪಳದ ಸಾರ್ವಜನಿಕ ಮೈದಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶಿವರಾಜ ತಂದೆ ನಿಂಬಪ್ಪ ಬಂಡಿ ವಯಾ: 25 ವರ್ಷ, ಜಾ: ಲಮಾಣಿ, ಉ: ಖಾಸಗಿಕೆಲಸ, ಸಾ: ಕುಣಕೇರಿ ತಾಂಡಾ ತಾ: ಕೊಪ್ಪಳ ಈತನು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ಮೌನೇಶ್ವರ ಮಾಲಿಪಾಟೀಲ ಪಿ.ಐ ನಗರ ಠಾಣೆ ಕೊಪ್ಪಳ ರವರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ 550=00 ರೂ, ಮಟಕಾ ನಂಬರ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್, ಇವುಗಳನ್ನು ಜಪ್ತ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

304852