Capture All

ಇಸ್ಪೇಟ್ ಜೂಜಾಟ ದಾಳಿ

ದಿನಾಂಕ 15-02-2020 ರಂದು ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ಪಂಚಾಯತಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 15 ಜನ ಆರೋಪಿತರು ಕೂಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ  ಶ್ರೀ. ಚಂದ್ರಶೇಖರ್ ಸಿ.ಪಿ.ಐ ಕುಷ್ಟಗಿ ವೃತ್ತ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ. 8,600/- ರೂ ವಶಪಡಿಸಿಕೊಂಡು 15 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ದಾಳಿ

ದಿನಾಂಕ 15-02-2020 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಯತ್ನಟ್ಟಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅರೋಪಿತನಾದ ಯಮನೂರಪ್ಪ ತಂದೆ ಈರಪ್ಪ ಸಾ: ಯತ್ನಟ್ಟಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ. ಸುರೇಶ ಡಿ. ಪಿ.ಎಸ್.ಐ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 1,758=80 ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ದಿನಾಂಕ 15-02-2020 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ದದೇಗಲ್ ಗ್ರಾಮದಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅರೋಪಿತನಾದ ಮರಿಯಪ್ಪ ಪೂಜಾರ ಈತನು ತನ್ನ ಪಾನಶಾಪ ಮುಂದೆ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಸಾರ್ವಜನಿಕರಿಗೆ ಮಾರಾಟ ಸೇವನೆ ಮಾಡಲು ಕೊಡುವಾಗ ಶ್ರೀ. ಸುರೇಶ ಡಿ. ಪಿ.ಎಸ್.ಐ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಮಟಕಾ ದಾಳಿ

ದಿನಾಂಕ 15-02-2020 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಸಾಲಾರ ಜಂಗ್ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಅಬ್ದುಲ್ ಶುಕುರ ತಂದೆ ಅಬ್ದುಲ್ ಅಹೆಮದ ಸಾಬ ಸಾ. ಕೊಪ್ಪಳ ಇತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಮೌನೇಶ್ವರ ಪಾಟೀಲ್ ಪಿ.ಐ. ಕೊಪ್ಪಳ ನಗರ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 420=00 ರೂ, ಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

ದಿನಾಂಕ 15-02-2020 ರಂದು ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ತಿಪ್ಪಸರನಾಳ ಗ್ರಾಮದ ಸರಕಾರಿ  ಹಳ್ಳದಲ್ಲಿ ಟ್ರ್ಯಾಕ್ಟರ್ ನಲ್ಲಿ ಆರೋಪಿತರು ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಲೋಡ  ಮಾಡಿಕೊಂಡು ಮಾರಾಟ ಮಾಡಲು ತುಂಬುತ್ತಿರುವಾಗ ಶ್ರೀ ವೆಂಕಟೇಶ ಪಿ.ಎಸ್.ಐ. ಕುಕನೂರ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು ಟ್ರ್ಯಾಕ್ಟರ ಚಾಲಕ ಓಡಿ ಹೋಗಿದ್ದು ಟ್ರ್ಯಾಕ್ಟರ ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 15-02-2020 ರಂದು ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ಬಳಗೇರಿ ಗ್ರಾಮದ ಸರಕಾರಿ  ಹಳ್ಳದಲ್ಲಿ ಟ್ರ್ಯಾಕ್ಟರ್ ನಲ್ಲಿ ಆರೋಪಿತರು ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಲೋಡ  ಮಾಡಿಕೊಂಡು ಮಾರಾಟ ಮಾಡಲು ತುಂಬುತ್ತಿರುವಾಗ ಶ್ರೀ ವೆಂಕಟೇಶ ಪಿ.ಎಸ್.ಐ. ಕುಕನೂರ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು ಟ್ರ್ಯಾಕ್ಟರ ಚಾಲಕ ಓಡಿ ಹೋಗಿದ್ದು ಟ್ರ್ಯಾಕ್ಟರ ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 15-02-2020 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಓಜನಹಳ್ಳಿ ಕ್ರಾಸ್ ಹತ್ತಿರ ಆರೋಪಿತರು ಹಿರೇಹಳ್ಳದಿಂದ  ಟ್ರ್ಯಾಕ್ಟರ್ ನಲ್ಲಿ ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಾಟ ಮಾಡುವಾಗ ಶ್ರೀ ಮೌನೇಶ್ವರ್ ಪಾಟೀಲ್ ಪಿ.ಐ. ಕೊಪ್ಪಳ ನಗರ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು ಟ್ರ್ಯಾಕ್ಟರ ಚಾಲಕ ಓಡಿ ಹೋಗಿದ್ದು ಟ್ರ್ಯಾಕ್ಟರ ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 15-02-2020 ರಂದು ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿತರು ಯಾವೊದೋ ಹಳ್ಳದಿಂದ  ಟ್ರ್ಯಾಕ್ಟರ್ ನಲ್ಲಿ ಸರ್ಕಾರದಿಂದ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಸಾಗಾಟ ಮಾಡುವಾಗ ಶ್ರೀ ಸುಪ್ರೀತ ಪಿ.ಎಸ್.ಐ. ಮುನಿರಾಬಾದ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು 02 ಟ್ರ್ಯಾಕ್ಟರ ಚಾಲಕರು ಓಡಿ ಹೋಗಿದ್ದು 02 ಟ್ರ್ಯಾಕ್ಟರ ಜಪ್ತಿ ಪಡಿಸಿಕೊಂಡು ಇಬ್ಬರು ಟ್ರ್ಯಾಕ್ಟರ ಚಾಲಕರು ಮತ್ತು ಮಾಲಿಕರ ವಿರುದ್ದ 02 ಪ್ರಕರಣಗಳನ್ನು ದಾಖಲಿಸಿಕೊಂಡು ಕ್ರಮ ಕೈಗೊಂಡಿರುತ್ತಾರೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

437129