Emblem

ಇಸ್ಪೇಟ್ ಜೂಜಾಟ ದಾಳಿ

ದಿನಾಂಕ 04-07-2019 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಪ್ಪಳ ನಗರದ ಭಾಗ್ಯನಗರದಲ್ಲಿರುವ ಹನುಮಂತಪ್ಪ ಹಿಂದಲಮನಿ ರವರ ಇಟ್ಟಂಗಿ ಭಟ್ಟೆ ಹತ್ತಿರ ಮೇಲೆ ಸಾರ್ವಜನಿಕ ಸ್ಥಳದಲ್ಲಿ 05 ಜನ ಆರೋಪಿತರು ಕೂಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ವಿನಾಯಕ ಪಿ.ಎಸ್.ಐ. ಕೊಪ್ಪಳ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ. 16,400/- ರೂ ವಶಪಡಿಸಿಕೊಂಡು 05 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ದಿನಾಂಕ 04-07-2019 ರಂದು ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗನಾಳ ಗ್ರಾಮದ ನಿರುಪಾದೇಶ್ವರ ಮಠದ ಮುಂದಿನ ಸಾರ್ವಜನಿಕ  ಸ್ಥಳದಲ್ಲಿ 04 ಜನ ಆರೋಪಿತರು ಕೂಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ವೆಂಕಟೇಶ ಚೌಹಾನ್ ಎ.ಎಸ್.ಐ ತಾವರಗೇರಾ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ. 1,620/- ರೂ ವಶಪಡಿಸಿಕೊಂಡು 04 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ದಿನಾಂಕ 04-07-2019 ರಂದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ವಣಗೇರಿ ಗ್ರಾಮದ ತಳವಗೇರಾ ರಸ್ತೆಯಲ್ಲಿರುವ ಹಳ್ಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ 10 ಜನ ಆರೋಪಿತರು ಕೂಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ವಿಶ್ವನಾಥ ಹಿರೇಗೌಡರ್ ಪಿ.ಎಸ್.ಐ. ಕುಷ್ಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ. 6,000/- ರೂ ವಶಪಡಿಸಿಕೊಂಡು 10 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ದಾಳಿ

ದಿನಾಂಕ 04-07-2019 ರಂದು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಡಿ ಕ್ರಾಸದ ಬಸ್ಸನಿಲ್ದಾಣ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ  ಶರಣಪ್ಪ ತಂದೆ ಹನುಮಂತಪ್ಪ ಹೊರಪೇಟೆ ಸಾ: ಬಂಡಿ ಯಲಬುರ್ಗಾ ಈತನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ. ಬಸವರಾಜ ಪಿ.ಎಸ್.ಐ. ಯಲಬುರ್ಗಾ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 909/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

ದಿನಾಂಕ 04-07-2019 ರಂದು ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಂಗಳೂರು ಗ್ರಾಮದ ಸೀಮಾದಲ್ಲಿಯ ಹಳ್ಳದಲ್ಲಿ ಆರೋಪಿತನಾದ ಮಂಜುನಾಥ ತಂದೆ ಶಿವಪುತ್ರಪ್ಪ ನೇನಕ್ಕಿ ಸಾ: ಮಂಗಳೂರು ಇತನು ಟ್ರ್ಯಾಕ್ಟರನಲ್ಲಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಅಕ್ರಮವಾಗಿ ಸಾಗಾಟ ಮಾಡುವಾಗ ಶ್ರೀ ಅಂಜನಯ್ಯ ಡಿ.ಎಸ್. ಪಿ.ಎಸ್.ಐ. ಬೇವೂರು ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಆರೋಪಿತನ್ನು ವಶಕ್ಕೆ ತೆಗೆದುಕೊಂಡು ಹಾಗೂ ಟ್ರ್ಯಾಕ್ಟರ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಮಟಕಾ ದಾಳಿ

ದಿನಾಂಕ 04-07-2019 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಮನಗರದಲ್ಲಿ ಸೋಮೇಶ್ವರ ಫೋಟೋಸ್ಟುಡಿಯೋ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಉಮಾಪತಿ ತಂದೆ ಹೊನ್ನೂರಗೌಡ ರಡ್ಡಿ, ವಯಸ್ಸು 45 ವರ್ಷ, ಜಾತಿ: ಗೊಲ್ಲರು ಉ: ಫೋಟೋಗ್ರಾಫರ್ ಸಾ: ವಾರ್ಡ ನಂ: 6ನೇ ವಾರ್ಡ, ಬಂಜಾರ ಕಾಲೋನಿ, ಶ್ರೀರಾಮನಗರ ಗಂಗಾವತಿ ಇತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಶಿವರಾಜ ಇಂಗಳೆ, ಪಿ.ಎಸ್.ಐ, ಡಿಸಿಐಬಿ ಘಟಕ ಕೊಪ್ಪಳರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತರಿಂದ ನಗದು ಹಣ ರೂ. 4,300=00 ಗಳನ್ನು ಜಪ್ತಿ ಪಡಿಸಿಕೊಂಡು ಹಾಗೂ ಮಟ್ಕಾ ಪಟ್ಟಿಯನ್ನು ನಾಗರಾಜ ಸಾ: ಜಂಬತನಹಳ್ಳಿ ತಾ: ಸಿಂಧನೂರು ಇವನಿಗೆ ಕೊಡುವದಾಗಿ ತಿಳಿಸಿದ್ದರಿಂದ ಸದರಿಯವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

139629