Capture All

ಇಸ್ಪೇಟ್ ಜೂಜಾಟ ದಾಳಿ

ದಿನಾಂಕ 27-06-2019 ರಂದು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಬೂದಗುಂಪಿ ಗ್ರಾಮದ ಶರಣಬಸವೇಶ್ವರ  ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ 05 ಜನ ಆರೋಪಿತರು ಕೂಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ಬಸವರಾಜ ಪಿ.ಎಸ್.ಐ ಯಲಬುರ್ಗಾ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ. 5,300/- ರೂ ವಶಪಡಿಸಿಕೊಂಡು 05 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಮಟಕಾ ಜೂಜಾಟ ದಾಳಿ

ದಿನಾಂಕ 27-06-2019 ರಂದು ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕವಲೂರ ಗ್ರಾಮದ ರಣದಮ್ಮ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ವೀರಭದ್ರಪ್ಪ ದ್ಯಾಮಪುರ ಸಾ: ಕವಲೂರ ಈತನು ಮಟಕಾ ಜೂಜಾಟದಲ್ಲಿ ತೊಡಿಗಿದ್ದಾಗ ಶ್ರೀ. ರಾಮಪ್ಪ ಪಿ.ಎಸ್.ಐ ಅಳವಂಡಿ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತನಿಂದ ರೂ. 1,110/- ರೂ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ದಾಳಿ

ದಿನಾಂಕ 27-06-2019 ರಂದು ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ಬಳಗೇರಿ ಬೂದಗುಂಪ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ  ಲಾಲ್ಯಪ್ಪ ಹೊನ್ನುಂಚಿ ಸಾ: ಕಕ್ಕಿಹಳ್ಳಿ ತಾಂಡಾ ಈತನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ. ರಾಘವೇಂದ್ರ ಪಿ.ಎಸ್.ಐ. ಕುಕನೂರ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 2,789/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ದಿನಾಂಕ 27-06-2019 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಕುವೆಂಪು ನಗರದ 500 ಪ್ಲಾಟ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ  ಹನುಮಪ್ಪ ತಂದೆ ಹುಗ್ಗೆಪ್ಪ ಕಟ್ಟಿಮನಿ ಸಾ: ಕುವೆಂಪು ನಗರ ಈತನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ. ಶಿವಾನಂದ ವಾಲಿಕಾರ ಪಿ.ಐ. ಕೊಪ್ಪಳ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 2,858/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

ದಿನಾಂಕ 27-06-2019 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಾಳ-ಮಾದಿನೂರ ಸೀಮಾದ ಹಿರೇಹಳ್ಳದಲ್ಲಿ 03 ಟ್ರ್ಯಾಕ್ಟರಗಳಲ್ಲಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಅಕ್ರಮವಾಗಿ ಟ್ರ್ಯಾಕ್ಟರನಲ್ಲಿ ಸಾಗಾಟ ಮಾಡುವಾಗ ಶ್ರೀ ಗುರುರಾಜ ಪಿ.ಎಸ್.ಐ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು 03 ಟ್ರ್ಯಾಕ್ಟರ ಚಾಲಕರು ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರ ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 27-06-2019 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಹಳ್ಳಿ ತುಂಗಭದ್ರಾ ಹೊಳೆಯಿಂದ ಟ್ರ್ಯಾಕ್ಟರನಲ್ಲಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಅಕ್ರಮವಾಗಿ ಸಾಗಾಟ ಮಾಡುವಾಗ ಶ್ರೀ ಶರತಕುಮಾರ ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು ಟ್ರ್ಯಾಕ್ಟರ ಚಾಲಕ ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರ ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

198960