Emblem

ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

ದಿನಾಂಕ 18-06-2019 ರಂದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಜಾಲಿಹಾಳ ಸೀಮಾದ ಹಳ್ಳದಲ್ಲಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಅಕ್ರಮವಾಗಿ ಟ್ರ್ಯಾಕ್ಟರನಲ್ಲಿ ತುಂಬುವಾಗ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಷ್ಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು ಆರೋಪಿತರು ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರ ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಮಟಕಾ ದಾಳಿ

ದಿನಾಂಕ 18-06-2019 ರಂದು ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಅಗಳಕೇರಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಕನಕಪ್ಪ ತಂದೆ ಬಾಲಪ್ಪ ಗಾಣದಾಳ ಸಾ: ಅಗಳಕೇರಾ ಇತನು  ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಕೆ. ರಂಗಯ್ಯ ಪಿ.ಎಸ್.ಐ. ಮುನಿರಾಬಾದ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 550=00 ಗಳನ್ನು ಜಪ್ತಿ ಪಡಿಸಿಕೊಂಡು ಹಾಗೂ ಮಟಕಾ ಪಟ್ಟಿ ತೆಗೆದುಕೊಳ್ಳುವ ಈಶಪ್ಪ ತಂದೆ ಅಂಡಿಗಳಪ್ಪ ಸಾ: ಅಗಳಕೇರಾ ಇವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 18-06-2019 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪೂರ ಗ್ರಾಮದ ಗಾಣಿಗೇರ ವಿರೇಶಪ್ಪ ರವರ ಅಂಗಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಸುರೇಶ ತಂದೆ ಮಾನಪ್ಪ ಪೂಜಾರ ಸಾ: ಕಾರಟಗಿ ಇತನು  ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಶರತ್ ಕುಮಾರ ಪಿ.ಎಸ್.ಐ. ಕಾರಟಗಿ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 820=00 ಗಳನ್ನು ಜಪ್ತಿ ಪಡಿಸಿಕೊಂಡು ಹಾಗೂ ಮಟಕಾ ಪಟ್ಟಿ ತೆಗೆದುಕೊಳ್ಳುವ ದೊಡ್ಡಪ್ಪ ತಂದೆ ಶರಣಪ್ಪ ಶಾಂತರ ಸಾ: ಕಾರಟಗಿ ಇವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

 

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

198959