ಕೊಪ್ಪಳದ ಬಗ್ಗೆ

ಎಪ್ರಿಲ್ 1, 1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು. ಕೊಪ್ಪಳವು ಇತಿಹಾಸದಲ್ಲಿ. ಚಕ್ರವರ್ತಿ ಅಶೋಕನ ಆಳ್ವಿಕೆಯ ಅವಧಿಯಲ್ಲಿ ಜೈನ ಧರ್ಮದ ಪ್ರಮುಖ ಕೇಂದ್ರವಾಗಿದ್ದರಿಂದ ಹಾಗೂ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ (ಅನೆಗುಂದಿ) ಯಾಗಿದ್ದರಿಂದ ಇದು ಪ್ರಾಚೀನ ಮತ್ತು ಮಧ್ಯಕಾಲೀನ ಯುಗದಲ್ಲಿ ಒಂದು ಪ್ರಮುಖ ಸ್ಥಳವಾಗಿತ್ತು. ಜಿಲ್ಲಾ ಕೇಂದ್ರವು ಯುನೆಸ್ಕೊ ವಿಶ್ವ ಪರಂಪರೆಯ ತಾಣವಾದ ಹಂಪಿಯಿಂದ ಕೇವಲ 38 ಕಿ.ಮೀ ಅಂತರದಲ್ಲಿದೆ. ಕೊಪ್ಪಳವು ಬ್ರಿಟಿಷ್ರ ವಿರುದ್ದ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಡರಗಿ ಭೀಮರಾವ್ ಮತ್ತು ಹಮ್ಮಗೀ ಕೆಂಚನಗೌಡರ ಬಲಿದಾನಕ್ಕೆ ಸಾಕ್ಷಿಯಾಗಿತ್ತು. ಹೈದರಾಬಾದ ನಿಜಾಮರ ಆಳ್ವಿಕೆಯಡಿಯಲ್ಲಿ ಹೈದರಬಾದ-ಕರ್ನಾಟಕ ಪ್ರದೇಶದ ಭಾಗವಾಗಿದ್ದ ಕೊಪ್ಪಳವು ದೇಶದ ಇತರ ಭಾಗಗಳಿಗಿಂತ ಒಂದು ವರ್ಷ ವಿಳಂಬವಾಗಿ 1948 ರ ಸಪ್ಟೆಂಬರ್ 18 ರಂದು ಸ್ವಾತಂತ್ರವನ್ನು ಪಡೆಯಿತು.

ಐತಿಹಾಸಿಕ ಮತ್ತು ಸಾಂಸ್ಕೃತಿಕ ಅಧ್ಬುತಗಳಲ್ಲಿ ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಇಟಗಿಯ ಮಹಾದೇವ ದೇವಸ್ಥಾನ ಹೆಸರುವಾಸಿಯಾಗಿದೆ. ಕೊಪ್ಪಳದ ಮಾದೆನೂರ ದೇವಸ್ಥಾನ ಮಧ್ಯಕಾಲೀನ ಯುಗದ ಸುಂದರ ಕಂಚಿನ ವಿಗ್ರಹಗಳನ್ನು ಹೊಂದಿದೆ. ಟಿಪ್ಪುಸುಲ್ತಾನ ಆಳ್ವಿಕೆಯಲ್ಲಿ ಫ್ರೆಂಚ್ ಎಂಜಿನಿಯರಗಳ ಸಹಾಯದಿಂದ ಬಲಪಡಿಸಿದ ಆಕರ್ಷಕವಾದ ಕೋಟೆ ಕೊಪ್ಪಳ ನಗರದಲ್ಲಿದೆ.  ಆಧುನಿಕ ಅದ್ಭುತಕ್ಕೆ ಸಾಕ್ಷಿಯಾದ ತುಂಗಭದ್ರಾ ಅಣೆಕಟ್ಟು ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.  ಚಿತ್ತಾಕರ್ಷಕ ವಿಭಿನ್ನ ಶೈಲಿಯ ಮರದ ಕಟ್ಟಿಗೆಯಲ್ಲಿ ಬಿಡಿಸುವ ಪ್ರಾಚೀನ ಚಿತ್ರಕಲೆ ಕಿನ್ನಾಳ ಗ್ರಾಮದ ಚಿತ್ರಗಾರ ಕುಶಲಕರ್ಮಿಗಳಿಂದ ಜೀವಂತವಾಗಿದ್ದು, ವಿಜಯನಗರ ಸಾಮ್ರಾಜ್ಯದ ನೆನಪನ್ನು ಜೀವಂತವಾಗಿಟ್ಟಿದೆ.  
 
ಕೊಪ್ಪಳ ಜಿಲ್ಲೆ ಸುಮಾರು 14 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಕೃಷಿ ಪ್ರಾಧಾನ್ಯತೆಯನ್ನು ಹೊಂದಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಕೊಪ್ಪಳವು ಉತ್ತಮ ಬೀಜ ಉತ್ಪಾದನಾ ಕೇಂದ್ರವಾಗಿದೆ.

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

258001

Main Menu