joomla vector social icons
 

Emblem

ಮಟಕಾ ದಾಳಿ

ದಿನಾಂಕ 16-07-2019 ರಂದು ಮುನಿರಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಗಿ ಗ್ರಾಮದ ರೈಲ್ವೇ ಸ್ಟೇಷನ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ನಾರಾಯಣಪ್ಪ ತಂದೆ ಹನುಮಂತಪ್ಪ ನೇಕಾರ ಸಾ: ಹುಲಗಿ ಇತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಶಿವರಾಜ ಇಂಗಳೆ ಪಿ.ಎಸ್.ಐ, ಡಿ.ಸಿ.ಐ.ಬಿ. ಘಟಕ ಜಿಲ್ಲಾ ಪೊಲೀಸ್ ಕಛೇರಿ ಕೊಪ್ಪಳ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 6,650=00 ಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 16-07-2019 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಭಜಂತ್ರಿ ಓಣಿಯ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ  ಮಂಜುನಾಥ ತಂದೆ ಗವಿಸಿದ್ದಪ್ಪ ಇತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಶಿವಾನಂದ  ಪಿ.ಐ, ಕೊಪ್ಪಳ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 1,010=00 ಗಳನ್ನು ಜಪ್ತಿ ಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

ದಿನಾಂಕ 16-07-2019 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಟಾಂಗಾ ಕೂಟಾ ಹತ್ತಿರ ಆರೋಪಿತ ಟ್ರ್ಯಾಕ್ಟರ ಚಾಲಕ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಅಕ್ರಮವಾಗಿ ಟ್ರ್ಯಾಕ್ಟರನಲ್ಲಿ ಸಾಗಾಟ ಮಾಡುವಾಗ ಶ್ರೀ ಶಿವಾನಂದ ವಾಲಿಕಾರ ಪಿ.ಐ. ಕೊಪ್ಪಳ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು ಆರೋಪಿತರು ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿದ್ದು ಟ್ರ್ಯಾಕ್ಟರ ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

124996

Main Menu