joomla vector social icons
 

Capture All

ಇಸ್ಪೇಟ್ ಜೂಜಾಟ ದಾಳಿ

ದಿನಾಂಕ 01-07-2019 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಸಾರ್ವಜನಿಕ ಮೈದಾನದ ಸಭಾಂಗಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 05 ಜನ ಆರೋಪಿತರು ಕೂಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ವಿನಾಯಕ ಪಿ.ಎಸ್.ಐ ಕೊಪ್ಪಳ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ. 9,200/- ರೂ ವಶಪಡಿಸಿಕೊಂಡು 05 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ದಿನಾಂಕ 01-07-2019 ರಂದು ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ಸಿ. ಕಾಲೋನಿಯ ಸಿದ್ದಾರೂಡ ಮಠಧ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 04 ಜನ ಆರೋಪಿತರು ಕೂಡಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ಡಿ.ಎಸ್. ಆಂಜನೇಯ ಪಿ.ಎಸ್.ಐ ಬೇವೂರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಆರೋಪಿತರಿಂದ ರೂ. 2,500/- ರೂ ವಶಪಡಿಸಿಕೊಂಡು 04 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ದಾಳಿ

ದಿನಾಂಕ 01-07-2019 ರಂದು ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ಮಸಬಹಂಚಿನಾಳ ಸೀಮಾದ ನಿಟ್ಟಾಲಿ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ  ಚಿದಾನಂದಪ್ಪ ತಂದೆ ದೇವಪ್ಪ ಸಾ: ಮಸಬಹಂಚಿನಾಳ ಈತನು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ. ರಾಘವೇಂದ್ರ ಪಿ.ಎಸ್.ಐ. ಕುಕನೂರ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಂದ ರೂ 940/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ಮಟಕಾ ದಾಳಿ

ದಿನಾಂಕ 01-07-2019 ರಂದು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಮುದೋಳ ಗ್ರಾಮದ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ರಾಚಯ್ಯ ತಂದೆ ಕರಿಸಿದ್ದಯ್ಯ ಸಾ: ಮುದೋಳ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಬಸವರಾಜ ಪಿ.ಎಸ್.ಐ. ಯಲಬುರ್ಗಾ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತರಿಂದ ನಗದು ಹಣ ರೂ. 550=00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 01-07-2019 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಹುಸೇನಸಾಬ ತಾವರಗೇರಾ ಸಾ: ಕಾರಟಗಿ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಶರತಕುಮಾರ ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 520=00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 01-07-2019 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ರಾಜಕುಮಾರ ರಂಗಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಮಲ್ಲಿಕಾರ್ಜುನ ಕಾಮನೂರ ಸಾ: ಕಾರಟಗಿ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಶರತಕುಮಾರ ಪಿ.ಎಸ್.ಐ. ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 330=00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

ದಿನಾಂಕ 01-07-2019 ರಂದು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ವೆಂಕಟಗಿರಿ ಸೀಮಾದ ಬಂಡ್ರಾಳ ರಸ್ತೆಯ ಪಕ್ಕದಲ್ಲಿ ಗಾಳೆಮ್ಮ ಗುಡಿಯ ಹತ್ತಿರ 07 ಟ್ರ್ಯಾಕ್ಟರಗಳಲ್ಲಿ ಜೆ.ಸಿ.ಬಿ. ಮುಖಾಂತರ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಕಳ್ಳತನದಿಂದ ಅಕ್ರಮವಾಗಿ ಟ್ರ್ಯಾಕ್ಟರನಲ್ಲಿ ಸಾಗಾಟ ಮಾಡುವಾಗ ಶ್ರೀ ಪ್ರಕಾಶ ಮಾಳಿ ಪಿ.ಎಸ್.ಐ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು 07 ಟ್ರ್ಯಾಕ್ಟರ ಟ್ರ್ಯಾಕ್ಟರ 1, ಜೆ.ಸಿ.ಬಿ 1 ಬೋಲೇರೊ ವಾಹನಗಳನ್ನು ಜಪ್ತಿ ಪಡಿಸಿಕೊಂಡು ಚಾಲಕ ಮತ್ತು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

124978

Main Menu