ಮಟಕಾ ದಾಳಿ
ದಿನಾಂಕ 10-10-2018 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾರಟಗಿ ನವಲಿ ರಸ್ತೆಯ ಕರಿಯಪ್ಪ ತಾತನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, ಆರೋಪಿತನಾದ ನಾಗರಾಜ @ ಬದ್ರಿ ತಂದೆ ಹನುಮಂತಪ್ಪ ಕೆಂಗೇರಿ ಸಾ: ಇಂದಿರಾ ನಗರ ಕಾರಟಗಿ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಜೆ.ಆರ್. ನಿಕ್ಕಂ ಪಿ.ಐ ಡಿ.ಸಿ.ಐ.ಬಿ. ಘಟಕ ಡಿ.ಪಿ.ಓ. ಕೊಪ್ಪಳ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 11,610=00 ಗಳನ್ನು ಜಪ್ತಿ ಪಡಿಸಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.