joomla vector social icons
 

playing cards

ಇಸ್ಪೇಟ ಜೂಜಾಟ ದಾಳಿ

ದಿನಾಂಕ 08-10-2018 ರಂದು ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕನಕಗಿರಿ ಪಟ್ಟಣದ ನೀರಲೂಟಿ ರಸ್ತೆಗೆ ಹೊಂದಿಕೊಂಡು ಇರುವ ಕ್ಲಬ್ ನಲ್ಲಿ ಅಂದರ್ ಬಹಾರ್ ಇಸ್ಪೇಟ ಜೂಜಾಟ ನಡೆಯುತ್ತಿದೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು ಕೂಡಲೇ ಶ್ರೀ. ದೀಪಕ ಆರ್. ಬೂಸರೆಡ್ಡಿ, ಶ್ರೀ. ಪ್ರಕಾಶ ಮಾಳಿ ಪಿ.ಎಸ್.ಐ ಗಂಗಾವತಿ ಗ್ರಾಮೀಣ ಠಾಣೆ ಮತ್ತು ಶ್ರೀ ಸೈಯ್ಯದ ಜಾಫರುದ್ದೀನ್ ಎ.ಎಸ್.ಐ. ಕನಕಗಿರಿ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ 22 ಜನ ಆರೋಪಿತರಿಂದ ರೂ 73,820/- ಗಳನ್ನು ವಶಪಡಿಸಿಕೊಂಡು 22 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

ದಿನಾಂಕ 08-10-2018 ರಂದು ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ಫ್ರೇಂಡ್ಸ್ ರಿಕ್ರೀಯೇಷನ್ ಸೂಸೈಟಿ (ಹಳೆಯ ಪಂಚತಾರ ಹೋಟೇಲ್ ಶೇಡ್) ದಲ್ಲಿ ಕ್ಲಬ್ ನಿಯಮಗಳನ್ನು ಉಲ್ಲಂಘಿಸಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು ಕೂಡಲೇ ಶ್ರೀ. ದೀಪಕ ಆರ್. ಬೂಸರೆಡ್ಡಿ, ಮತ್ತು ಶ್ರೀ ಸೈಯ್ಯದ ಜಾಫರುದ್ದೀನ್ ಎ.ಎಸ್.ಐ. ಕನಕಗಿರಿ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ 08 ಜನ ಆರೋಪಿತರಿಂದ ರೂ 12,790/- ಗಳನ್ನು ವಶಪಡಿಸಿಕೊಂಡು 22 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

ದಿನಾಂಕ 08-10-2018 ರಂದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಬನ್ನಿಗೋಳ ಗ್ರಾಮದ ಶಿವನಮ್ಮ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 10 ಜನ ಆರೋಪಿತು ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಷ್ಟಗಿ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ 05 ಜನ ಆರೋಪಿತರು ಸಿಕ್ಕಿಬಿದ್ದಿದ್ದು ಸಿಕ್ಕಿವರಿಂದ ರೂ 4,350/- ಗಳನ್ನು ವಶಪಡಿಸಿಕೊಂಡು 05 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

025425

Main Menu