joomla vector social icons
 

Emblem

ಮಟಕಾ  ದಾಳಿ

ದಿನಾಂಕ 02-10-2018 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣದ ನವಲಿ  ರಸ್ತೆಯ ಮುತ್ಯಾಲೆಪ್ಪ ರವರ ಬಿಲ್ಡಿಂಗ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಶರಣಪ್ಪ ತಂದೆ ಶಿವಬಸಪ್ಪ @ ಬಸಪ್ಪಗದ್ದಿ ಸಾ: ಕಾರಟಗಿ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ. ಎಂ. ಶಿವಕುಮಾರ ಪಿ.ಎಸ್.ಐ ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ.2,850=00 ಗಳನ್ನು ಜಪ್ತಿ ಪಡಿಸಿಕೊಂಡು ವಿಚಾರಿಸಲು ಮಟಕಾ ಪಟ್ಟಿಯನ್ನು ಇನ್ನೊಬ್ಬ ಆರೋಪಿ ಬಸವರಾಜ ತಂದೆ ಶಂಕ್ರಪ್ಪ ಬೇರಗಿ ಸಾ: ಸಿದ್ದಾಪುರ ಇವನಿಗೆ ಕೊಡುವುದಾಗ ತಿಳಿಸಿದ್ದು ಇಬ್ಬರು ಆರೋಪಿತರ ವಿರದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ದಾಳಿ

ದಿನಾಂಕ 02-10-2018 ರಂದು ಕೊಪ್ಪಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ ಕಷು್ಟಗಿ ರಸ್ತೆಯಲ್ಲಿರುವ ಗಂಗೋತ್ರಿ ಬಾರ್ ಹತ್ತಿರ ಆರೋಪಿತನಾದ ಮಂಜುನಾಥ ತಂದೆ ಬಂಡೆಪ್ಪ ಸಾ: ಕೊಪ್ಪಳ ಈತನು ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ. ಶೇಷಗಿರಿ ರಾವ್ ಎ.ಎಸ್.. ಕೊಪ್ಪಳ ನಗರ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ರೂ. 1,080/-  ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

ದಿನಾಂಕ 02-10-2018 ರಂದು ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯ ನಿಲೋಗಲ್ಲ ಗ್ರಾಮದಲ್ಲಿ ಆರೋಪಿತನಾದ ಹುಚ್ಚಪ್ಪ ತಂದೆ ಹನುಮಪ್ಪ ಸಾ: ನಿಲೋಗಲ್ಲ ಈತನು ಯಾವುದೇ ಪರವಾನಿಗೆ ಇಲ್ಲದೇ ತನ್ನ ಚಹಾದ ಅಂಗಡಿಗೆ ಬರುವ ಸಾರ್ವಜನಿಕರಿಗೆ ಆಕ್ರಮವಾಗಿ ಮದ್ಯ ಸೇವಿಸಲು ಅವಕಾಶ ಮಾಡಿಕೊಡುತ್ತಿದ್ದಾಗ ಶ್ರೀ. ಶಿವರಾಜ ಪಿ.ಎಸ್.. ಬೇವೂರ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಗೊಂಡಿರುತ್ತಾರೆ.

 

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

025410

Main Menu