joomla vector social icons
 

Capture All

ಇಸ್ಪೇಟ್ ಜೂಜಾಟ ದಾಳಿ

ದಿನಾಂಕ 09-07-2018 ರಂದು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಲಬುರ್ಗಾದ ಪಾಂಡುರಂಗ ದೇವಸ್ಥಾನದ ಹತ್ತಿರ ಇರುವ ಸಮುದಾಯ ಭವನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 18 ಜನ ಆರೋಪಿತರು ಅಕ್ರಮವಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ. ವಿನಾಯಕ ಪಿ.ಎಸ್.ಐ ಯಲಬುರ್ಗಾ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, 18 ಜನ ಆರೋಪಿತರು ಸಿಕ್ಕಿಬಿದ್ದಿದ್ದು ಆರೋಪಿತರಿಂದ ರೂ. 10,200/- ಜಪ್ತಿ ಪಡಿಸಿಕೊಂಡು 18 ಜನ ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

ಮಟಕಾ  ದಾಳಿ

ದಿನಾಂಕ 09-07-2018 ರಂದು ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ತುಮರಿಕೊಪ್ಪ ಗ್ರಾಮದಲ್ಲಿ ವಾಲ್ಮೀಕಿ ದೇವಸ್ಥಾನದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಸುಭಾಸ ತಂದೆ ದ್ಯಾಮಣ್ಣ ಚಿಕನಾಳ ಮತ್ತು ಯಮನೂರ ತಂದೆ ಹನಮಪ್ಪ ಗಾಣದಾಳ ಇವರು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ನಾಗರಾಜ ಪಿ.ಎಸ್.ಐ. ಹನುಮಸಾಗರ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತರಿಂದ ನಗದು ಹಣ ರೂ. 4,130=00 ಗಳನ್ನು ಜಪ್ತಿ ಪಡಿಸಿಕೊಂಡು ಇಬ್ಬರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 09-07-2018 ರಂದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೆಮನ್ನಾಪುರ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಅಮರಯ್ಯ ತಂದೆ ಮುದಕಯ್ಯ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಷ್ಟಗಿ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 3,450=00 ಗಳನ್ನು ಜಪ್ತಿ ಪಡಿಸಿಕೊಂಡು ವಿಚಾರಿಸಲು ಮಟಕಾ ಪಟ್ಟಿ ಇನ್ನೊಬ್ಬ ಆರೋಪಿತನಾದ ಆನಂದ ಸಾವಜಿ ಕುಷ್ಟಗಿ ಇವನಿಗೆ ಕೊಡುವುದಾಗಿ ತಿಳಿಸಿದ್ದು ಇಬ್ಬರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 09-07-2018 ರಂದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೆಮನ್ನಾಪುರ ಗ್ರಾಮದ ಪ್ಯಾಟಿ ಬಸವೇಶ್ವರ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಹನುಮಂತಪ್ಪ ತಂದೆ ಅಮರಪ್ಪ ಗುರಿಕಾರ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಷ್ಟಗಿ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 4,550=00 ಗಳನ್ನು ಜಪ್ತಿ ಪಡಿಸಿಕೊಂಡು ವಿಚಾರಿಸಲು ಮಟಕಾ ಪಟ್ಟಿ ಇನ್ನೊಬ್ಬ ಆರೋಪಿತನಾದ ಆನಂದ ಸಾವಜಿ ಕುಷ್ಟಗಿ ಇವನಿಗೆ ಕೊಡುವುದಾಗಿ ತಿಳಿಸಿದ್ದು ಇಬ್ಬರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ದಾಳಿ

ದಿನಾಂಕ 09-07-2018 ರಂದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜಕಲ್ ಗ್ರಾಮದ ನ್ಯೂ ಡಾಬಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಸಂಗಮೇಶ ತಂದೆ ಶಿವಸಂಗಪ್ಪ ಹಡಪದ ಸಾ: ಬಿಜಕಲ ಈತನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವಾಗ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಷ್ಟಗಿ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ 1,894/- ರೂ ಮೌಲ್ಯದ ಮದ್ಯವನ್ನು ವಶಕ್ಕೆ ತೆಗೆದುಕೊಂಡು ಆರೋಪಿತನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳ ಸಾಗಾಣಿಕೆ

ದಿನಾಂಕ 09-07-2018 ರಂದು ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಕೂರ ಹಳ್ಳದಿಂದ ಆರೋಪಿತರು ಅಕ್ರಮವಾಗಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಟ್ರ್ಯಾಕ್ಟರನಲ್ಲಿ ಮರಳನ್ನು ತುಂಬಿಕೊಂಡು ಹೋಗುತ್ತಿದ್ದಾಗ ಶ್ರೀ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಷ್ಟಗಿ ಠಾಣೆ ರವರು ಸಿಬ್ಬಂದಿ ಸಮೇತ ದಾಳಿಮಾಡಿದಾಗ ಆರೋಪಿತರು ಓಡಿ ಹೋಗಿದ್ದು ಚಾಲಕ ಮತ್ತು ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

ದಿನಾಂಕ 09-07-2018 ರಂದು ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಸೂಳಿಕೇರಿ ಸೀಮಾದ ಹಳ್ಳದಿಂದ ಆರೋಪಿತನಾದ ಭೀಮಣ್ಣ ತಂದೆ ಹೊಳಿಯಪ್ಪ ಮಲಗಣ್ಣನವರ ಈತನು ಅಕ್ರಮವಾಗಿ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಟ್ರ್ಯಾಕ್ಟರನಲ್ಲಿ ಸಾಗಾಣೆ ಮಾಡುತ್ತಿದ್ದಾ ಶ್ರೀ ಮಲ್ಲಿಕಾರ್ಜುನ ಎ.ಎಸ್.ಐ. ಬೇವೂರ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿತನಿಗೆ ವಶಕ್ಕೆ ತೆಗೆದುಕೊಂಡು ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

022735

Main Menu