ನಾಗರೀಕರ ಹಕ್ಕುಗಳು

ನಾಗರಿಕರ ಹಕ್ಕುಗಳನ್ನು ಕಾನೂನಿನಲ್ಲಿ ಕ್ರೋಢಿಕರಿ ಈ ಕೆಳಗಿನಂತೆ ಸೇರಿಸಲಾಗಿದೆ.

15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಮಹಿಳೆಯರು ಠಾಣೆಗೆ ಹೋಗಲು ನಿರಾಕರಿಸಬಹುದು ಮತ್ತು ಅವರ ಮನೆಯಲ್ಲಿಯೆ ಸಂದರ್ಶನ ನಡೆಸಲು ಸೂಚಿಸಬಹುದು.

  • ಸಂಜ್ಞೇಯ ಅಪರಾಧದ ಸಮಯದಲ್ಲಿ ಸಾಮಾನ್ಯವಾಗಿ ಬಂಧನ ವಾರಂಟ್ ಇಲ್ಲದೆ ಬಂಧಿಸಬಹುದು.  
  • ಬಂಧಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ತನ್ನ ಗುರುತನ್ನು ಸ್ಪಷ್ಟವಾಗಿ ಪ್ರದರ್ಶಿಸಿಬೇಕು.
  • ವಾರೆಂಟ್ ಜಾರಿಯಾದ ನಂತರ ಬಂಧಿಸುವ ಸಮಯದಲ್ಲಿ ಪೊಲೀಸರು ಒತ್ತಾಯ ಮಾಡಬಹುದು. ಆದರೆ ಬಂಧಿಸಿದ ವ್ಯಕ್ತಿ ಘನತೆಯನ್ನು ಕಾಪಾಡಬೇಕು. ಬಂಧಿಸಿದ ವ್ಯಕ್ತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಥವಾ ಪರೇಡ ಮಾಡಬಾರದು.
  • ಬಂಧಿಸುವಕ್ಕಿಂತ ಮುಂಚೆ ಪೊಲೀಸ್ ಅಧಿಕಾರಿಯು ಬಂಧನದ ಜ್ಞಾಪನವನ್ನು ತಯಾರಿಸಿರಬೇಕು, ಅದು ಸ್ಥಳದಲ್ಲಿ ಲಭ್ಯವಿರುವ ಸಾಕ್ಷಿಯಿಂದ ದೃಢೀಕರಿಸಿರಬೇಕು. ಮುಖ್ಯವಾಗಿ ಬಂಧಿಸಿದ ವ್ಯಕ್ತಿಗೆ ತನ್ನ ಸಂಬಂದಿಕ ಮತ್ತು ನ್ಯಾಯಾವಾದಿಯೊಂದಿಗೆ ಸಂಪರ್ಕಿಸಲು ಅನುವು ಮಾಡಬೇಕು.  
  • ಮಕ್ಕಳು ಮತ್ತು ಬಾಲಾಪರಾಧಿಗಳನ್ನು ಬಂಧನಕ್ಕೆ ತೆಗೆದುಕೊಳ್ಳುವಾಗ ಯಾವುದೇ ಬಲವಂತವಾಗದಂತೆ ವಿಶೇಷ ಗಮನ ಹರಿಸಬೇಕು. ಇಂತಹ ಸಂದರ್ಭಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಜವಾಬ್ದಾರಿಯುತ ಸ್ಥಳಿಯ ನಾಗರಿಕರ ಸಹಾಯ ಪಡೆದು ಕನಿಷ್ಠ ಒತ್ತಾಯ ಮಾಡಬೇಕು.
  • ಬಂಧಿತರನ್ನು 24 ಗಂಟೆಯೊಳಗಾಗಿ ನ್ಯಾಯಾಧೀಶರ ಮುಂದೆ ಹಾಜರ ಪಡಿಸಬೇಕು. ಅಪರಾಧಿಯ ವಿಚಾರಣೆಯನ್ನು ಆರೋಪಿಯ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು.
  • ಮಾನ್ಯ ನ್ಯಾಯಾಲಯವು ಬಂಧಿತ ವ್ಯಕ್ತಿಯನ್ನು ಪೊಲೀಸ್ ಬಂಧನಕ್ಕೆ ನೀಡುವ ಸಮಯದಲ್ಲಿ ಸರ್ಕಾರಿ ವೈದ್ಯರಿಂದ ಪರೀಕ್ಷಿಸಿ ವೈದ್ಯಕೀಯ ಪ್ರಮಾಣಪತ್ರವನ್ನು ಪಡೆದು ಒಪ್ಪಿಸುತ್ತದೆ. ಬಂಧಿತನಿಂದ ಜಪ್ತಿಮಾಡಿಕೊಂಡ ವಸ್ತುಗಳನ್ನು ಮಾನ್ಯ ನ್ಯಾಯಾಲಯದಲ್ಲಿ ಹಾಜರ ಪಡಿಸಲಾಗುತ್ತದೆ. ಆ ವ್ಯಕ್ತಿಯು ತನ್ನ ಜಪ್ತಿ ಮಾಡಿದ ವಸ್ತುಗಳನ್ನು ಮಾನ್ಯ ನ್ಯಾಯಾಲಯದ ಆದೇಶದನ್ವಯ  ಮರಳಿ ಪಡೆಯಬಹುದು.

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

243926

Main Menu