ನಾಗರೀಕರ ಕರ್ತವ್ಯಗಳು

ಕೊಪ್ಪಳ ಜಿಲ್ಲಾ ಪೊಲೀಸ್ ಎಲ್ಲಾ ನಾಗರೀಕರಿಂದ ಸಹಾಯ ಮತ್ತು ಸಹಕಾರವನ್ನು ಪಡೆದು ಜಿಲ್ಲೆಯನ್ನು ಅಪರಾಧ-ಮುಕ್ತ ಮತ್ತು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಸೌಹಾರ್ದತೆಯನ್ನು ಬೆಳೆಸಿ ಶಾಂತಿಯುತ ಜೀವನ ನೆಲೆಸಲು ಪ್ರಯತ್ನಿಸುತ್ತದೆ. 

  • ನಾವು ಬಯಸುವುದೇನೆಂದರೆ ಪ್ರತಿಯೊಬ್ಬ ನಾಗರೀಕರು ತಮ್ಮ ಸರಹದ್ದಿನ ಪೊಲೀಸ್ ಠಾಣೆ ಮತ್ತು ಅದರ ದೂರವಾಣಿ ಸಂಖ್ಯೆಯ ಮಾಹಿತಿ ಹೊಂದಿರಬೇಕು, ಮತ್ತು ಅವರು ಯಾವುದೇ ಅಪರಾಧದ ಮಾಹಿತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ 100 ಸಂಖ್ಯೆ ಕರೆಯನ್ನು ಮಾಡಿ ತಿಳಿಸಿತಕ್ಕದ್ದು.  
    • ಭಯೋತ್ಪಾದನೆಯಂತಹ ಅಪರಾಧಗಳು
    • ನಗರದ ಶಾಂತಿ ಮತ್ತು ಸುವ್ಯೆವಸ್ಥೆಗೆ ತೊಡಕಾಗುವ ಚಟುವಟಿಕೆಗಳು
    • ಕೊಲೆ, ಭಾರಿ ಗಾಯ, ಅಪಹರಣ, ಇತ್ಯಾದಿಗಳಲ್ಲಿ ಭಾಗಿಯಾದವರ ಬಗ್ಗೆ ಮಾಹಿತಿ.
    • ದರೋಡೆ, ಸುಲಿಗೆ, ಕಳ್ಳತನ, ಜಬರಿ ಮನೆ ಕಳವು, ಮುಂತಾದ ಸ್ವತ್ತಿನ ಅಪರಾದಗಳ ಬಗ್ಗೆ ಮಾಹಿತಿ.
    • ನೆರೆಹೊರೆಯಲ್ಲಿ ನಾಗರೀಕರ ಸುರಕ್ಷತೆ ಮತ್ತು ಭದ್ರತೆಯ ಮೇಲೆ ಪರಿಣಾಮ ಬಿರುವಂತಹ ಸಂಶಯಾಸ್ಪದ ಚಟುವಟಿಕೆಗಳು.
    • ಭ್ರಷ್ಟಾಚಾರದ ಬಗ್ಗೆ ಮಾಹಿತಿ
    • ಸರ್ಕಾರಿ ನೌಕರನಿಂದ ನಂಬಿಕೆದ್ರೋಹ ಅಪರಾಧ. (ಮಾಹಿತಿದಾರರ ಗೌಪ್ಯತೆಯನ್ನು ಕಾಪಾಡಲಾಗುವುದು)  
    • ಆಹಾರ ಸಾಮಗ್ರಿಗಳ ಕಲಬೆರಕೆ ಮತ್ತು ನಕಲಿ ಔಷಧಗಳ ಬಗ್ಗೆ
  • ಅಪಘಾತ ಸಮಯದಲ್ಲಿ ಒಬ್ಬ ಜವಾಬ್ದಾರಿಯುತ ನಾಗರೀಕನಾಗಿ ಕೂಡಲೇ ಸಹಾಯಕ್ಕೆ ಆಗಮಿಸಿ ಗಾಯಾಳುಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿ  ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು.
  • ಪ್ರಮುಖ ಉತ್ಸವಗಳಲ್ಲಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಪ್ರತಿಭಟನೆಗಳ ಸಮಯದಲ್ಲಿ ಪೊಲೀಸರು ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸುವುದು. ಸಂಚಾರಿ ನಿಯಮಗಳನ್ನು ಸಹ ಪಾಲನೆ ಮಾಡುವುದು.
  • ನಾಗರೀಕರು ತನಿಖೆಯ ಸಮಯದಲ್ಲಿ ಶೋಧನೆ, ಜಪ್ತಿ, ಮಹಜರ ಮಾಡಲು ಸಹಕರಿಸಬೇಕು.
  • ಅಪರಿಚಿತರನ್ನು ಮನೆಕೆಲಸಕ್ಕೆ ನೇಮಿಸಿ ಕೊಳ್ಳುವ ಮೊದಲು ಅವನ  ಪೂರ್ವ ಪರ ಚರಿತ್ರೆ ಪರಿಶೀಲನೆಗೆ ಕೊರಬೇಕು.
  • ಅಪರಿಚಿತರಿಗೆ ಮನೆ ಬಾಡಿಗೆಯನ್ನು ಕೊಡುವ ಮುನ್ನ ಅವರ ಪೂರ್ವ ಪರವನ್ನು ತಿಳಿದುಕೊಳ್ಳತಕ್ಕದ್ದು.  
  • ನಾಗರಿಕರು ತಮ್ಮ ಅಕ್ಕ ಪಕ್ಕದಲ್ಲಿ ನಡೆಯುವ ಪ್ರಮುಖ ಬೆಳೆವಣಿಗೆಗಳ ಬಗ್ಗೆ ತಿಳಿಸಲು ಸ್ಥಳಿಯ ಬೀಟ ಪೊಲೀಸರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬೇಕು.  

ಕೊಪ್ಪಳದ ಬಗ್ಗೆ

ಎಪ್ರಿಲ್ 1,1998 ರಂದು ಕೊಪ್ಪಳ ಜಿಲ್ಲೆಯು ಆಡಳಿತಾತ್ಮಕವಾಗಿ ಅಸ್ತಿತ್ವಕ್ಕೆ ಬಂದಿತು, ಇತಿಹಾಸದಲ್ಲಿ ಗುರುತಿಸಿಕೊಳ್ಳದಿದ್ದರೂ ಸಹ ವಿಶ್ವಪರಂಪರೆಯ ತಾಣ ಹಂಪಿಯ ಜೊತೆಗೆ ಐತಿಹಾಸಿಕವಾಗಿ ಹತ್ತಿರದ ಸಂಬಂಧ ಹೊಂದಿದೆ. ಇದು ಹಿಂದೆ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಭಾಗವಾಗಿತ್ತು, ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ವಿಸ್ಮಯ ಹಾಗೂ ಅತ್ಯುನ್ನತ ತುಂಗಾಭದ್ರ ಆಣೆಕಟ್ಟು ಕೊಪ್ಪಳವನ್ನು ಉತ್ತುಂಗಕ್ಕೇರಿಸಿದೆ.

ಮುಂದೆ ಓದಿ...

ಸಂಪರ್ಕಿಸಿ

ಪೊಲೀಸ್ ಅಧೀಕ್ಷಕರು
ಜಿಲ್ಲಾ ಪೊಲೀಸ್ ಕಛೇರಿ
ಅಶೋಕ ವೃತ್ತ ಕೊಪ್ಪಳ
583231

+91 08539-230111
This email address is being protected from spambots. You need JavaScript enabled to view it.
   
   

ಒಟ್ಟು ಸಂದರ್ಶಕರು

242069

Main Menu