WhatsApp Image 2018 11 27 at 12.33.19 PM

: ಪತ್ರಿಕಾ ಪ್ರಕಟಣೆ :

 ದಿನಾಂಕ 26-11-2018 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ- ಕುಂಟೋಜಿ ಮತ್ತು ಹಳೇ ಕುಂಟೋಜಿ ರಸ್ತೆಯ ಪಕ್ಕದಲ್ಲಿ ವಿರುಪಣ್ಣ ತಂದೆ ಹನುಮಂತಪ್ಪ ಕುಡತಿನಿ ಇತನಿಗೆ ಸೇರಿದ ಹೋಲದಲ್ಲಿ ಆಕ್ರಮವಾಗಿ ಮರಳು ಸಂಗ್ರಹ ಮಾಡಿರುತ್ತಾರೆ ಅಂತಾ ಖಚಿತ ಮಾಹಿತಿ ಬಂದಿದ್ದು, ಶ್ರೀಮತಿ. ರೇಣುಕಾ ಕೆ. ಸುಕುಮಾರ ಐ.ಪಿ.ಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಶ್ರೀ. ಅಮರೇಶ ಪಿ.ಎಸ್.ಐ ಡಿ.ಸಿ.ಐ.ಬಿ. ಘಟಕ ಕೊಪ್ಪಳ, ಶ್ರೀ. ಶಿವರಾಜ ಇಂಗಳೆ ಪಿ.ಎಸ್.ಐ. ಡಿ.ಸಿ.ಐ.ಬಿ. ಘಟಕ ಜಿಲ್ಲಾ ಪೊಲೀಸ್ ಕಛೇರಿ ಕೊಪ್ಪಳ ಹಾಗೂ ಶ್ರೀ. ಶರತ ಕುಮಾರ ಪಿ.ಎಸ್.ಐ. ಕಾರಟಗಿ ಠಾಣೆ ರವರ ನೇತೃತ್ವದಲ್ಲಿ ಸಿಬ್ಬಂದಿ ಸಮೇತ ದಾಳಿ ಮಾಡಿ 70 ಟ್ರ್ಯಾಕ್ಟರಗಳಷ್ಟು, 140 ಕ್ಯೂಬಿಕ್ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಕಳ್ಳತನದಿಂದ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹ ಮಾಡಿದ್ದು ಕಂಡು ಬಂದ ಪ್ರಯುಕ್ತ ಆರೋಪಿತರಾದ 1. ಅಮರಯ್ಯ ಸ್ವಾಮಿ 2. ವೀರುಪಣ್ಣ ತಂದೆ ಹನುಮಂತಪ್ಪ ಕುಡತಿನಿ 3. ಸುಬ್ಬರಾ‍ವ್ ತಂದೆ ಶೇಷರಾವ್ ನೆಕ್ಕಂಟಿ 4. ಮಲ್ಲಪ್ಪ ಸಾ: ಕುಂಟೋಜಿ ಸದರಿಯವರ ವಿರುದ್ದ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 388/2018 ಕಲಂ. 379, 34 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಸಿಕೊಂಡು ತನಿಖೆ ಕೈ ಗೊಳ್ಳಲಾಗಿದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

065967