Election

: ಪತ್ರಿಕಾ ಪ್ರಕಟಣೆ :

ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು

1] ಪ್ಲೈಯಿಂಗ ಸ್ಕಾಡ ಅಧಿಕಾರಿಗಳು -6  ಯಲಬುರ್ಗಾ ರವರು ಯಲಬುರ್ಗಾ ಠಾಣೆಯಲ್ಲಿ ದೂರನ್ನು ನೀಡಿದ್ದು,  ಯಲಬುರ್ಗಾ ನಗರದ ಕೊತ್ವಾಲ ರವರ ಮಿಲ್ ದಲ್ಲಿ ಕಾಂಗ್ರೇಸ ಪಕ್ಷ ವತಿಯಿಂದ ಚುನಾವಣಾ ಪ್ರಚಾರ ಸಭೆ ನಡೆಸಿದ್ದು, ಸದರ ಪ್ರಚಾರ ಸಭೆಯಲ್ಲಿ 1] ಅಬ್ದುಲಸಾಬ  2] ಝಾಕೀರಹುಸೇನ   3] ರಶೀದ ಮುಬಾರಕ  ಎಂಬ ಹೆಸರಿನ ವ್ಯಕ್ತಿಗಳು ಒಂದು ಧರ್ಮದ ಹೆಸರಿನಲ್ಲಿ ಜಾತಿಯ ಹೆಸರಿನಲ್ಲಿ, ಒಂದು ಪಕ್ಷ ಹಾಗೂ ಪಕ್ಷದ ಅಭ್ಯರ್ಥಿಯ ಪರವಾಗಿ ಮತದಾನ ಮಾಡುವಂತೆ ಪ್ರೇರೆಪಿಸಿದ್ದು ಸದರ ಸಭೆಯಲ್ಲಿ ಅನುಚಿತ ಪ್ರಭಾವ ಬೀರಿದ್ದು, ಹೀಗೆ ಧರ್ಮದ ಹೆಸರಿನಲ್ಲಿ ಜಾತಿಯ ಹೆಸರಿನಲ್ಲಿ ಮತ ಯಾಚಿಸುವುದು ಹಾಗೂ ಹಾಕುವಂತೆ ಪ್ರೆರೆಪಿಸುವುದು ಚುನಾವಣೆಯ ಮಾಧರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವದರಿಂದ, ಸದರಿ ಚುನಾವಣಾ ಪ್ರಚಾರ ಸಭೆ ಸಂಘಟನಾಕಾರರಾದ ಶ್ರೀ ಸುಧೀರ ಕೊರ್ಲಹಳ್ಳಿ ಮತ್ತು  1] ಅಬ್ದುಲಸಾಬ  2] ಝಾಕೀರಹುಸೇನ 3] ರಶೀದ ಮುಬಾರಕ  ರವರ ಮೇಲೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂ. 94/2018 ಕಲಂ 171(ಎಫ್) ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

2]       ದಿನಾಂಕ 07-05-2018 ರಂದು ರಾತ್ರಿ 9-30 ಗಂಟೆಗೆ ಪ್ಲೈಯಿಂಗ ಸ್ಕಾಡ ಅಧಿಕಾರಿಗಳು ಗಂಗಾವತಿ ನಗರ ಠಾಣೆಯಲ್ಲಿ ದೂರನ್ನು ನೀಡಿದ್ದು ರಾತ್ರಿ 8-00 ಗಂಟೆ ಸುಮಾರಿಗೆ ಗಂಗಾವತಿ ನಗರದ ಆನೆಗುಂದಿ ರಸ್ತೆಯಲ್ಲಿರುವ ವಿರುಪಾಪುರ ತಾಂಡಾ ವಾರ್ಡ ನಂ. 31 ರಲ್ಲಿಯ ಸೇವಾಲಾಲ್ ಗುಡಿಯ ಹತ್ತಿರ (01) ಚೈತ್ರಾ ಕುಂದಾಪುರ, (02) ಅಯ್ಯನಗೌಡ ಹೇರೂರು, (03) ಯಮನೂರ ಚೌಡ್ಕಿ ಹಾಗೂ ಇತರರು ಸೇರಿಕೊಂಡು ಸುಮಾರು 150 ರಿಂದ 200 ಜನರನ್ನು ಸೇರಿಸಿ ಚುನಾವಣಾ ಪ್ರಚಾರಕ್ಕೆ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳದೆ ಚುನಾವಣಾ ಪ್ರಚಾರ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ. ಸದರಿಯವರ ಮೇಲೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂ.181/18 ಕಲಂ 188 ಸಹಿತ 34 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

036559