Emblem

ಅಕ್ರಮ ಮರಳು ಕಳ್ಳ ಸಾಗಾಣಿಕೆ ದಾಳಿ

1) ದಿನಾಂಕ 03-10-2018 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಯರಡೋಣಾ ಕ್ರಾಸ್ ಹತ್ತಿರ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಆರೋಪಿತರಾದ 1. ಅಮರೇಗೌಡ ತಂದೆ ಮಲ್ಲನಗೌಡ ಪೊಲೀಸ್ ಪಾಟೀಲ್ 2. ಲಕ್ಷ್ಮಣ ತಂದೆ ಈರಪ್ಪ ಭೋವಿ 3. ತಿಮ್ಮಪ್ಪ ತಂದೆ ಹನುಮಂತಪ್ಪ ಸಿಂಗನಾಳ ಇವರು 03 ಟ್ರ್ಯಾಕ್ಟರನಲ್ಲಿ ಮರಳನ್ನು ತುಂಗಾಭದ್ರಾ ನದಿಯಿಂದ ತುಂಬಿಕೊಂಡು ಯರಡೋಣಾ ಮರ್ಲಾನಹಳ್ಳಿ ದಿಂದ ಸಾಗಾಟ ಮಾಡುವಾಗ ಶ್ರೀ ರಾಜಕುಮಾರ ಪಿ.ಐ. ಡಿ.ಸಿ.ಐ.ಬಿ. ಘಟಕ ಡಿ.ಪಿ.ಓ ಕೊಪ್ಪಳ ಮತ್ತು ಶ್ರೀ. ಎಂ. ಶಿವಕುಮಾರ ಪಿ.ಎಸ್.ಕಾರಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ 03 ಜನ ಆರೋಪಿತರನ್ನು ಮತ್ತು 03 ಟ್ರ್ಯಾಕ್ಟರ ವಶಕ್ಕೆ ತೆಗೆದುಕೊಂಡು ಚಾಲಕ ಮತ್ತು ಮಾಲೀಕರ ವಿರುದ್ದ 02 ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

2) ದಿನಾಂಕ 03-10-2018 ರಂದು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಮುಧೋಳ ಸೀಮಾದ ಸರ್ಕಾರಿ ಹಳ್ಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಟ್ರ್ಯಾಕ್ಟರನಲ್ಲಿ ಆರೋಪಿತನಾದ ಮೈಲಾರಪ್ಪ ತಂದೆ ಶಿವಪ್ಪ ಈತನು ಟ್ರ್ಯಾಕ್ಟರನಲ್ಲಿ ಮರಳನ್ನು ತುಂಬುವಾಗ ಶ್ರೀ. ವಿನಾಯಕ ಪಿ.ಎಸ್.ಯಲಬುರ್ಗಾ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿ ಮತ್ತು ಟ್ರ್ಯಾಕ್ಟರ ವಶಕ್ಕೆ ತೆಗೆದುಕೊಂಡು ಚಾಲಕ ಮತ್ತು ಮಾಲೀಕನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

3) ದಿನಾಂಕ 03-10-2018 ರಂದು ಬೆಳಗಿನ ಜಾವ ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ರಾವಣಕಿ ಗ್ರಾಮದ ಸರ್ಕಾರಿ ಹಳ್ಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ 02 ಟ್ರ್ಯಾಕ್ಟರನಲ್ಲಿ ಆರೋಪಿತರು ಮರಳನ್ನು ತುಂಬುವಾಗ ಶ್ರೀ. ರಾಘವೇಂದ್ರ ಪಿ.ಎಸ್.ಕುಕನೂರ  ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು  ಆರೋಪಿತರು ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿದ್ದು 02 ಟ್ರ್ಯಾಕ್ಟರ ವಶಕ್ಕೆ ತೆಗೆದುಕೊಂಡು ಚಾಲಕ ಮತ್ತು ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

4) ದಿನಾಂಕ 03-10-2018 ರಂದು ಬೆಳಗಿನ ಜಾವ ಕುಕನೂರ ಪೊಲೀಸ್ ಠಾಣೆ ವ್ಯಾಪ್ತಿಯ ರಾವಣಕಿ ಗ್ರಾಮದ ಈರಣ್ಣ ದೇಸ್ಥಾನದ ಸರ್ಕಾರಿ ಹಳ್ಳದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ 02 ಟ್ರ್ಯಾಕ್ಟರನಲ್ಲಿ ಆರೋಪಿತರು ಮರಳನ್ನು ತುಂಬುವಾಗ ಶ್ರೀ. ರಾಘವೇಂದ್ರ ಪಿ.ಎಸ್.ಕುಕನೂರ  ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಲು  ಆರೋಪಿತರು ಟ್ರ್ಯಾಕ್ಟರ ಬಿಟ್ಟು ಓಡಿ ಹೋಗಿದ್ದು 02 ಟ್ರ್ಯಾಕ್ಟರ ವಶಕ್ಕೆ ತೆಗೆದುಕೊಂಡು ಚಾಲಕ ಮತ್ತು ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

065913