Emblem

ಮಟಕಾ  ದಾಳಿ

ದಿನಾಂಕ 08-08-2018 ರಂದು ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾವತಿ ನಗರದ ಸಂತೆಬಯಲಿನ ಚರ್ಚ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ರಮೇಶ ತಂದೆ ಹನಮನಗೌಡ ಛತ್ರಪತಿ ಸಾ: ಗಂಗಾವತಿ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ತಿಪ್ಪಣ್ಣ ನಾಟೇಕರ ಎ.ಎಸ್.ಐ. ಗಂಗಾವತಿ ನಗರ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 1,530=00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ದಾಳಿ

ದಿನಾಂಕ 08-08-2018 ರಂದು ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಸಾಸ್ವಿಹಾಳ  ಗ್ರಾಮದಲ್ಲಿ ಆರೋಪಿತನಾದ ದೇವಪ್ಪ ತಂದೆ ಚಿದಾನಂದಪ್ಪ ಮಾದರ ಸಾ: ಸಾಸ್ವಿಹಾಳ  ಈತನು ತನ್ನ ಪಾನ ಶಾಪ ಅಂಗಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಶ್ರೀ ದೊಡ್ಡಯ್ಯ ಎ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ರೂ. 1328/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ದಿನಾಂಕ 08-08-2018 ರಂದು ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಜುಮಲಾಪುರ ಗ್ರಾಮದಲ್ಲಿ ಆರೋಪಿತನಾದ ಹನುಮಂತ ತಂದೆ ದುರಗಪ್ಪ ಸಾ: ಜುಮಲಾಪುರ  ಈತನು ತನ್ನ ಮನೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಆಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಶ್ರೀ ದೊಡ್ಡಯ್ಯ ಎ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ರೂ. 1328/- ಮೌಲ್ಯದ ಆಕ್ರಮ ಮದ್ಯ ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.

ಕಳ್ಳ ಭಟ್ಟಿ ಸರಾಯಿ ಮಾರಾಟ ದಾಳಿ

ದಿನಾಂಕ: 08-08-2018 ರಂದು ಹನುಮಸಾಗರ ಪೊಲೀಸ್ ಠಾಣೆ ಸೀಮಾದ ಗಡಚಿಂತಿಯ ಎ.ಕೆ. ಪಾಟೀಲ್ ರವರ ಜಮೀನಿನ ಹತ್ತಿರ ಗುಡ್ಡದಲ್ಲಿ ಕಳ್ಳಭಟ್ಟಿ ಸರಾಯಿ ತಯಾರಿಸಿ ಮಾರಾಟ ಮಾಡುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಶ್ರೀ ಹೆಚ್. ನಾಗರಾಜ ಪಿ.ಎಸ್.ಐ. ಹನುಮಸಾಗರ ಪೊಲೀಸ್ ಠಾಣೆ ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ ಆರೋಪಿತರಾದ 1] ಲಕ್ಷ್ಮವ್ವ ಗಂಡ ಉಮಲೆಪ್ಪ ರಾಠೋಡ 2] ಭೀಮವ್ವ ಗಂಡ ಮಲ್ಲಪ್ಪ ಗೊರೆಬಾಳ ಸಾ: ಗಡಗಂಚಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ 07 ಲೀಟರ ಕಳ್ಳಭಟ್ಟಿ ಸರಾಯಿ, ಅ.ಕಿ. ರೂ. 700/- ಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಪ್ರಕರಣ ಸಂ. 130/2018 ಕಲಂ. 273, 284 ಸಹಿತ 34 ಐ.ಪಿ.ಸಿ. ಹಾಗೂ 32, 34 ಕರ್ನಾಟಕ ಅಬಕಾರಿ ಕಾಯ್ದೆ, ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.

About Koppal

On 1st April 1998, Koppal is steeped in history - evident from its close proximity to Hampi, a World Heritage site which centuries ago was the seat of the formidable Vijayanagara empire. The rich historical and cultural marvels stand cheek to jowl with more modern wonders like the towering Tungabhadra Dam.

Read more...

Contact Address

Office of The Superintendent of Police

Ashok Circle, Koppal 583231

08539-230111
This email address is being protected from spambots. You need JavaScript enabled to view it.

Total Visitors

036555