ಮಟಕಾ ದಾಳಿ
ದಿನಾಂಕ 11-07-2018 ರಂದು ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯ ಯಡ್ಡೋಣಿ ಗ್ರಾಮದ ದ್ಯಾಮಂಬಿಕಾ ಕಟ್ಟೆಯ ಹತ್ತಿರ ಗುಳೆಕಡೆ ಹೋಗುವ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಕಾಡಪ್ಪ ತಂದೆ ಯಮನಪ್ಪ ತಳವಾರ ಈತನು ಮಟಕಾ ಪಟ್ಟಿ ಬರೆಯುತ್ತಿದ್ದಾಗ ಶ್ರೀ ಶಿವರಾಜ ಇಂಗಳೆ ಪಿ.ಎಸ್.ಐ. ಬೇವೂರ ಠಾಣೆ ರವರು ಸಿಬ್ಬಂದಿ ಸಮೇತ ಹೋಗಿ ದಾಳಿ ಮಾಡಿ, ಆರೋಪಿತನಿಂದ ನಗದು ಹಣ ರೂ. 1,440=00 ಗಳನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತಾರೆ.
ಅಕ್ರಮ ಮರಳು ಕಳ್ಳ ಸಾಗಾಣಿಕೆ
ದಿನಾಂಕ 11-07-2018 ರಂದು ಕಾರಟಗಿ ಪೊಲೀಸ್ ಠಾಣೆ ವ್ಯಾಪ್ತಿಯ ಯರಡೋಣ ಗ್ರಾಮದ ಇಳಿಗನೂರ ಕ್ರಾಸ್ ಹತ್ತಿರ ಆರೋಪಿತರಾದ ಪರಶುರಾಮ ತಂದೆ ಶೇಖಣ್ಣ ಮತ್ತು ರಂಗಣಗೌಡ ತಂದೆ ಪಂಪನಗೌಡ ಸಾ: ಮುಕ್ಕುಂದಾ ಇವರು ಆಕ್ರಮವಾಗಿ ಮರಳನ್ನು 2 ಟ್ರ್ಯಾಕ್ಟರಗಳಲ್ಲಿ ಸಾಗಾಟ ಮಾಡುವಾಗ ಶ್ರೀ ಎಂ. ಶಿವಕುಮಾರ ಪಿ.ಎಸ್.ಐ. ಕಾರಟಗಿ ಠಾಣೆ ರವರು ಸಿಬ್ಬಂದಿ ಸಮೇತ ದಾಳಿ ಮಾಡಿ ಆರೋಪಿ ಮತ್ತು 02 ಟ್ರ್ಯಾಕ್ಟರ ವಶ ಪಡಿಸಿಕೊಂಡು ಚಾಲಕ ಮತ್ತು ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈ ಕೊಂಡಿರುತ್ತಾರೆ.